ಹುಕ್ಕೇರಿ

ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಘಟಕ ವ್ಯವಸ್ಥಾಪಕ

ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಘಟಕ ವ್ಯವಸ್ಥಾಪಕ

ಹುಕ್ಕೇರಿ 14: ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಸ್ ನಿಲ್ದಾಣವನ್ನು ಸಾರಿಗೆ ಘಟಕ ವ್ಯವಸ್ಥಾಪಕ, ಸಿಬ್ಬಂದಿಗಳು ಹಾಗೂ ಪುರಸಭೆ ಅಧಿಕಾರಿಗಳು ಸ್ವಚ್ಚಗೋಳಿಸುವ ಮುಖಾಂತರ ಸ್ವಚ್ಚ ಭಾರತ ಅಭಿಯಾನದಡಿ ಸ್ವಚ್ಚತಾ ಸಂಕಲ್ಪ ವನ್ನು ನೆರವೇರಿಸಿದರು. ಸಂಕೇಶ್ವರ ಸಾರಿಗೆ ಘಟಕ ವ್ಯವಸ್ಥಾಪಕ ಆರ್ ಜಿ ನಾಡಗೌಡಾ ಮತ್ತು ಪುರಸಭೆ ಕಿರಿಯ ಆರೋಗ್ಯ ನಿರಿಕ್ಷಕ ಪ್ರಕಾಶಗೌಡಾ ಪಾಟೀಲ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಗಳು ಬೆಳಿಗ್ಗೆ ಕೈಯಲ್ಲಿ ಕಸಬರಿಗೆ ಹಿಡಿದು ಬಸ್ ನಿಲ್ದಾಣ ಸ್ವಚ್ಚ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ" ದೇಶಕಾ ಹರ ರವಿವಾರ ವಿಶೇಷತಾ ದಿನ" ಎಂಬ ಸಂದೇಶವನ್ನು ಸಾಕಾರಗೋಳಿಸುವ ಕಾರ್ಯ ಮಾಡುತ್ತಿದ್ದಾರೆ.ಮಾದ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಆರ್ ಜಿ ನಾಡಗೌಡಾ ರಾಷ್ಟ್ರಪೀತ ಮಹಾತ್ಮಾ ಗಾಂಧೀಜಿ ಮತ್ತು ಪ್ರಧಾನ ಮಂತ್ರಿ ನರೆಂದ್ರ ಮೋದಿ ಯವರ ಕನಸಿನ ಯೋಜನೆ ಸ್ವಚ್ಚ ಭಾರತ ಅಭಿಯಾನದಡಿ ಸಂಕೇಶ್ವರ ಪುರಸಭೆ  ಆರೋಗ್ಯ ನಿರಿಕ್ಷಕ  ಪ್ರಕಾಶಗೌಡಾ ಪಾಟೀಲ ನೇತೃತ್ವದಲ್ಲಿ  ನಾವು ಪ್ರತಿ ರವಿವಾರ ಬಸ್ಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಂಪೂರ್ಣವಾಗಿ ಸ್ವಚ್ಚಮಾಡುವ  ಯೋಜನೆ  ರೂಪಿಸಿಕೊಂಡಿದ್ದೆವೆ.ಸಾರ್ವಜನಿಕರು ಸಹ ಸ್ವಚ್ಚತೆ ಬಗ್ಗೆ ಗಮನ ಹರಿಸಿ ನಮ್ಮ ಪರಿಸರವನ್ನು ಸ್ವಚ್ಚ ಮಾಡುವ ಮೂಲಕ ಆರೋಗ್ಯ ವಂತ ರಾಷ್ಟ್ರ ಮಾಡಲು ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಸಂಕೇಶ್ವರ ಸಾರಿಗೆ ಘಟಕದ ತಾಂತ್ರಿಕ ಸಿಬ್ಬಂದಿಗಳು, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ