ಬ್ರಿಟನ್; ಬೆಚ್ಚಿಬೀಳಿಸುತ್ತಿರುವ ಕೋವಿಡ್ ಮೂರನೇ ಅಲೆ
ಲಂಡನ್, ಜ 6 ಜಗತ್ತಿನಾದ್ಯಂತ ಕೋವಿಡ್ 3ನೇ ಅಲೆ ಬೆಚ್ಚಿಬೀಳಿಸುತ್ತಿದ್ದು, ಬ್ರಿಟನ್ ನಲ್ಲಿ ಬುಧವಾರ ಒಟ್ಟು 1,94,747 ಕೊರೊನಾ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1,38,35,334ಕ್ಕೆರ ಏರಿಕೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 334 ಮಂದಿ ಕೋವಿಡ್ ಗೆ ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 1,49284ಕ್ಕೆ ತಲುಪಿದೆ. ಆಸ್ಪತ್ರೆಯಲ್ಲಿ 17,276 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಡಿಸೆಂಬರ್ 31ರವರೆಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಪ್ರತಿ 15 ವ್ಯಕ್ತಿಗಳಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ತಗುಲಿದೆ. ಒಂದು ವರ್ಷದಲ್ಲಿ ಸುಮಾರು 32,70,800 ಮಂದಿ ಕೋವಿಡ್ 19 ಪಾಸಿಟಿವ್ಗೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ.