ಕೊವಾಕ್ಸಿನ್ ಗೆ ಬ್ರಿಟನ್ ಮಾನ್ಯತೆ
ಲಂಡನ್, ನ 10 : ಭಾರತದಲ್ಲಿ ತಯಾರಾಗುವ ಕೊವಾಕ್ಸಿನ್ ಲಸಿಕೆಯನ್ನು ಮಾನ್ಯತೆ ಹೊಂದಿದ ಕೋವಿಡ್ ಲಸಿಕೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬ್ರಿಟನ್ ಸರ್ಕಾರ ಹೇಳಿದೆ. ಈ ನಿರ್ಧಾರ ಈ ತಿಂಗಳ 22 ರಂದು ಬೆಳಿಗ್ಗೆ 4 ರಿಂದ ಅಂತರರಾಷ್ಟ್ರೀಯ ಪ್ರಯಾಣಗಳಿಗೆ ಅನ್ವಯಿಸುತ್ತದೆ. ಭಾರತ್ ಬಯೋಟೆಕ್ ತಯಾರಿಸಿರುವ ಕೊವಾಕ್ಸಿನ್ ಲಸಿಕೆಯ ಎರಡು ಡೋಸ್ ಪಡೆದು ಬ್ರಿಟನ್ ಗೆ ತೆರಳಿದ ಪ್ರಯಾಣಿಕರು ಇನ್ನು ಮುಂದೆ ಐಸೋಲೇಷನ್ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.
ಬ್ರಿಟನ್ ಪ್ರವೇಶಿಸುವ 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೂ ಪ್ರಯಾಣ ನಿಯಮಗಳನ್ನು ಸರ್ಕಾರ ಸರಳಗೊಳಿಸಿದೆ. ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ ಎಂದು ಪರಿಗಣಿಸಿ ಐಸೋಲೇಷನ್ ನಲ್ಲಿರಿಸುವುದು ಅಗತ್ಯವಿಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಯುಕೆಗೆ ಬಂದ ನಂತರ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದು, ಪಾಸಿಟಿವ್ ಬಂದರೆ ಮಾತ್ರ ಪಿ ಸಿ ಆರ್ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು. ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣ ಪತ್ರಗಳನ್ನು ಪರಸ್ಪರ ಗುರುತಿಸಲು ಭಾರತ 96 ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.