ಬ್ಲೂಆರಿಜನ್ 2ನೇ ಅಂತರಿಕ್ಷ ಯಾನ ಯಶಸ್ವಿ.. ಭಾವೋದ್ವೇಗಕ್ಕೊಳಗಾದ ಹಿರಿಯನಟ..!
ಟೆಕ್ಸಾಸ್, ಅ 14: ಆಗ ಸಿನಿಮಾದಲ್ಲಿ .. ಈಗ ನಿಜ ಜೀವನದಲ್ಲಿ .. ಅದೇ ದೃಶ್ಯ ಪುನರಾವರ್ತನೆಗೊಂಡಿದೆ...! ಹಾಗಾಗಿ ಆ ಹಿರಿಯ ನಟ ಭಾವೋದ್ವೇಗಕ್ಕೊಳಾದರು. 11 ನಿಮಿಷಗಳ ಅಂತರಿಕ್ಷ ಯಾನ ತಮ್ಮ ಜೀವನದ ಅತ್ಯಂತ ಸ್ಮರಣೀಯ ಅನುಭವ ಎಂದು ಅವರು ಪ್ರತಿಕ್ರಿಯಿಸಿದರು. ಕೆನಡಾ ನಟ ವಿಲಿಯಂ ಶಾಟ್ನರ್ ಸೇರಿದಂತೆ ನಾಲ್ವರು ಬ್ಲೂ ಆರಿಜಿನ್ ಮೂಲಕ ಅಂತರಿಕ್ಷ ಯಾನವನ್ನು ಯಶಸ್ವಿಯಾಗಿ ಮುಗಿಸಿ ಭೂಮಿಗೆ ಮರಳಿದ್ದಾರೆ. ಆ ಮೂಲಕ ತೊಂಬತ್ತನೆಯ ಇಳಿ ವಯಸ್ಸಿನಲ್ಲೂ ಅಂತರಿಕ್ಷ ಯಾನ ನಡೆಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಜೆಫ್ ಬೆಜೋಸ್ ಮಾಲೀಕತ್ವದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಬ್ಲೂ ಆರಿಜಿನ್ ತನ್ನ ಎರಡನೇ ನವೀನ ಅಂತರಿಕ್ಷ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಟ ವಿಲಿಯಂ ಶಾಟ್ನರ್ ಜೊತೆ ಬ್ಲೂ ಒರಿಜಿನ್ ಎಕ್ಸಿಕ್ಯೂಟಿವ್ ಆಡ್ರೆ ಪವರ್ಸ್, ಪ್ಲಾಂಟ್ ಲ್ಯಾಬ್ಸ್ ಸಹ-ಸಂಸ್ಥಾಪಕ ಕ್ರಿಸ್ ಬೋಷುಜೆನ್ ಹಾಗೂ ಮೆಡಿಡೇಟಾ ಸೊಲ್ಯೂಶನ್ ನ ಗ್ಲೋನ್ ಡಿ ವ್ರೈಸ್ 11 ನಿಮಿಷಗಳ ಅಂತರಿಕ್ಷಾ ಯಾನದಲ್ಲಿ ಪಾಲ್ಗೊಂಡಿದ್ದರು. '' ಇದೊಂದು ಅದ್ಭುತ ಅನುಭೂತಿ .. ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಂತರಿಕ್ಷದಿಂದ ನೋಡಿದಾಗ ಭೂ ಗ್ರಹ ತುಂಬಾ ಸುಂದರವಾಗಿ ಕಾಣುತ್ತದೆ. ಅದೇ ಸಮಯದಲ್ಲಿ ಅದು ಅಪಾಯದಲ್ಲಿದೆ ಎಂಬುದು ಕಂಡುಬರುತ್ತಿದೆ ಅದನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ, ”ಎಂದು ಶಾಟ್ನರ್ ಭಾವೋದ್ವೇಗದಿಂದ ನುಡಿದಿದ್ದಾರೆ.
ಪಶ್ಚಿಮ ಟೆಕ್ಸಾಸ್ ನಿಂದ ಬುಧವಾರ ಅಮೆರಿಕಾ ಕಾಲಮಾನ ಪ್ರಕಾರ .. 9.49 ನಿಮಿಷ ಸಮಯದಲ್ಲಿ ಸಬ್-ಆರ್ಬಿಟಲ್ ರಾಕೆಟ್ (ಎನ್ಎಸ್ -18) ಬಾಹ್ಯಾಕಾಶಕ್ಕೆ ಉಡಾವಣೆಗೊಂಡಿತು. ಸುಮಾರು 66 ಮೈಲಿಗಳ ಎತ್ತರ ಅಂತರಿಕ್ಷದಲ್ಲಿ ಕಾಲ ಕಳೆದ ನಂತರ, ಮತ್ತೆ ಭೂಮಿಗೆ ಮರಳಿತು. ಏತನ್ಮಧ್ಯೆ, ಜೆಫ್ ಬೆಜೋಸ್ ಸ್ವತಃ ಕ್ಯಾಪ್ಸುಲ್ ಬಳಿಗೆ ಆಗಮಿಸಿ ಅವರನ್ನು ಹೊರಗೆ ಆಹ್ವಾನಿಸಿದ್ದಾರೆ.
ಅತ್ಯಂತ ಹಿರಿಯ..
60 ರ ದಶಕದಲ್ಲಿ 'ಸ್ಟಾರ್ ಟ್ರೆಕ್' ಮೂಲಕ ವಿಶ್ವಾದ್ಯಂತ ಜನಪ್ರಿಯತೆಗಳಿಸಿದ್ದ ಕೆನಡಾ ನಟ ವಿಲಿಯಂ ಶಾಟ್ನರ್ ... ಕ್ಯಾಪ್ಟನ್ ಜೇಮ್ಸ್ ಕ್ರಿಕ್ ಪಾತ್ರದಲ್ಲಿನ ಅವರ ಅಭಿನಯ ಅದ್ಭುತವಾದದ್ದು ಆದರೆ, ಅವರು ಅಂತರಿಕ್ಷ ಪ್ರಯಾಣ ನಡೆಸುವಂತೆ ಮಾಡುವ ಮೂಲಕ, ಖಾಸಗಿ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥ ಜೆಫ್ ಬೆಜೋಸ್ ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯಗೊಳಿಸಲು ಮುಂದಾಗಿದ್ದಾರೆ.
ಈ ಮೊದಲು NASAದ ಮಾಜಿ ಗಗನಯಾತ್ರಿ ಜಾನ್ ಗ್ಲೆನ್ 77 ನೇ ವಯಸ್ಸಿನಲ್ಲಿ ಡಿಸ್ಕವರಿ ನೌಕಾಯಾನದಲ್ಲಿ ಪ್ರಯಾಣ ಪೂರ್ಣಗೊಳಿಸಿದ್ದರು, ಆದರೆ, ಅಮೇರಿಕಾದ ಏವಿಯೇಟರ್ ವಾಲಿ ಫಂಕ್ (82) ಕಳೆದ ಜುಲೈನಲ್ಲಿ ಬ್ಲೂ ಆರಿಜಿನ್ ಬಾಹ್ಯಾಕಾಶ ಯಾನ ಯಶಸ್ವಿಯಾಗಿ ಪೂರ್ಣಗೊಳಿಸಿ ದಾಖಲೆ ಮುರಿದಿದ್ದರು. ಈಗ ವಿಲಿಯಂ ಶಾಟ್ನರ್ ಕಾರ್ಮೆನ್ ಲೈನ್ ವರೆಗೆ ಮಾತ್ರ ತೆರಳಿದ್ದಾರೆ. ಅದು ಭೂಮಿಯಿಂದ ಕೇವಲ 100 ಕಿ.ಮೀ ಎತ್ತರದಲ್ಲಿದೆ.