ಅಂತರರಾಷ್ಟ್ರೀಯ

ಕಾಬೂಲ್​​ನ ಆಸ್ಪತ್ರೆ ಬಳಿ ಸ್ಫೋಟ: 19 ಜನ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್​​ನ ಆಸ್ಪತ್ರೆ ಬಳಿ ಸ್ಫೋಟ: 19 ಜನ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್: ನ. 2: ಅಫ್ಘಾನಿಸ್ತಾನದ ಕಾಬೂಲ್​ನ ಆಸ್ಪತ್ರೆಯ ಬಳಿ ಅವಳಿ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಕನಿಷ್ಠ 19 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಲಿಬಾನ್​ ಅಧಿಕಾರಿಗಳು ಎರಡು ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಗುಂಡಿನ ದಾಳಿ ಸಹ ನಡೆಯಿತು ಎಂದಿದ್ದಾರೆ. ಈ ಸ್ಫೋಟದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

"ಹತ್ತೊಂಬತ್ತು ಮೃತ ದೇಹಗಳು ಮತ್ತು ಸುಮಾರು 50 ಗಾಯಾಳುಗಳನ್ನು ಕಾಬೂಲ್‌ನ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ.

ಆಗಸ್ಟ್‌ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಮಸೀದಿಗಳು ಮತ್ತು ಇತರ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ದಾಳಿ ನಡೆಸುತ್ತಲೇ ಇದೆ. 2017 ರಲ್ಲಿ 400 ಹಾಸಿಗೆಯುಳ್ಳ ಆಸ್ಪತ್ರೆಯ ಮೇಲೆ ದಾಳಿ ಮಾಡಿ, 30ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.

ಸುದ್ದಿ ಓದಿ