ಕ್ರೀಡೆ

ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಸಂಭ್ರಮ

ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಸಂಭ್ರಮ

ಲಂಡನ್ : ಜುಲೈ 08: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 50 ವರ್ಷ ಪೂರೈಸಿರುವ ಕ್ರಿಕೆಟ್ ದಿಗ್ಗಜ ಗಂಗೂಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಜುಲೈ 8 ರಂದು 50 ವರ್ಷ ಪೂರೈಸಿರುವ ಗಂಗೂಲಿ ಇದಕ್ಕೂ ಮುನ್ನವೇ ಹುಟ್ಟಿದ ದಿನದ ಆಚರಣೆ ಮಾಡಿದ್ದಾರೆ.

ಮಾಜಿ ಐಪಿಎಲ್ ಚೇರ್ಮನ್ ಮತ್ತು ಹಿರಿಯ ಕ್ರಿಕೆಟ್ ಆಡಳಿತಗಾರ ರಾಜೀವ್ ಶುಕ್ಲಾ ಗುರುವಾರ ಟ್ವಿಟರ್‌ನಲ್ಲಿ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೌರವ್ ಗಂಗೂಲಿ  ಅವರ 50 ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅವರಿಗೆ ಸಂತೋಷ ಮತ್ತು ಆರೋಗ್ಯಕರ ಜೀವನವನ್ನು ಬಯಸುತ್ತೇನೆಂದು ಶುಭ ಕೋರಿದ್ದಾರೆ.

ಗಂಗೂಲಿ ಸದ್ಯ ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಪ್ರವಾಸ ಕೈಗೊಂಡಿದ್ದಾರೆ. ಭಾರತವು ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ 5 ನೇ ಟೆಸ್ಟ್ ನಲ್ಲಿ ಸೋತಿದ್ದು  ಮತ್ತು ಈಗ ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಲಿದೆ.

ಗಂಗೂಲಿ ಮತ್ತು ತೆಂಡೂಲ್ಕರ್ ಇಬ್ಬರೂ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಡಿದ ಬಹಳಷ್ಟು ಒಳ್ಳೆಯ ನೆನಪುಗಳನ್ನು ಹೊಂದಿದ್ದಾರೆ. ಇಬ್ಬರೂ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯ ಎರಡರಲ್ಲೂ ಸಾಕಷ್ಟು ರನ್ ಗಳಿಸಿದರು ಮತ್ತು ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ 2007 ರಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಕೊನೆಯ ಟೆಸ್ಟ್ ಸರಣಿಯನ್ನು ಗೆದ್ದ ತಂಡದ ಭಾಗವಾಗಿದ್ದರು. 2002ರಲ್ಲಿ ಇಂಗ್ಲೆಂಡ್‌ನಲ್ಲಿ ನ್ಯಾಟ್‌ವೆಸ್ಟ್ ಟ್ರೋಫಿ ಗೆದ್ದ ತಂಡದಲ್ಲಿ ಇವರಿಬ್ಬರೂ ಸೇರಿದ್ದರು.

ಗಂಗೂಲಿ ಮತ್ತು ತೆಂಡೂಲ್ಕರ್ ಒಟ್ಟಿಗೆ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಜೊತೆಯಾಟದ ರನ್‌ಗಳ ವಿಶ್ವ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯು 176 ಇನ್ನಿಂಗ್ಸ್ ಗಳಲ್ಲಿ 47.55 ಸರಾಸರಿಯಲ್ಲಿ 8227 ರನ್ ಗಳಿಸಿತು.

ಸುದ್ದಿ ಓದಿ