ಬಿಲ್ ಕ್ಲಿಂಟನ್ ಚೇತರಿಕೆ, ಇಂದು ಮನೆಗೆ…!
ವಾಷಿಂಗ್ಟನ್,ಅ 17 ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತಿದೆ ಎಂದು ಅವರ ವಕ್ತಾರರು ಹೇಳಿಕೆ ನೀಡಿದ್ದಾರೆ.
75 ವರ್ಷದ ಬಿಲ್ ಕ್ಲಿಂಟನ್ ಅವರನ್ನು ಅನಾರೋಗ್ಯದ ಕಾರಣದಿಂದ ಕ್ಯಾಲಿಪೋರ್ನಿಯಾ ಆಸ್ಪತ್ರೆಗೆ ಕಳೆದ ಕೆಲ ದಿನಗಳ ಹಿಂದೆ ದಾಖಲು ಮಾಡಲಾಗಿತ್ತು. ಆಸ್ಪತ್ರೆ ವೈದ್ಯರ ಪ್ರಕಾರ ಅವರ ಆರೋಗ್ಯ ಸುಧಾರಣೆಯಾಗುತ್ತಿದ್ದು ಇಂದು ಅಥವಾ ನಾಳೆ ಅವರನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಆಸ್ಪತ್ರೆ ಮೂಲಗಳು ಹೇಳಿದೆ.
1993 ರಿಂದ 2001ರವರೆಗೆ ಬಿಲ್ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದರು .ಅರಕಾನಸ್ ಗೌರ್ನರ್ ರಾಗಿದ್ದ ಬಿಲ್ ಕ್ಲಿಂಟನ್, ಸಂಸತ್ತಿನ ದೋಷಾರೋಪಣೆಗೆ ಗುರಿಯಾಗಿದ್ದ ಎರಡನೇ ಅಮೆರಿಕಾದ ಅಧ್ಯಕ್ಷರು ಎಂಬ ಅಪಖ್ಯಾತಿಗೂ ಒಳಗಾಗಿದ್ದರು. ಎರಡು ಭಾರಿ ಸಂಸತ್ತಿನ ದೋಷಾರೋಪಣೆಗೆ ಗುರಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಮೂರನೇ ಅಧ್ಯಕ್ಷರಾಗಿದ್ದರು .