ಭಾರತ-ಇಸ್ರೇಲ್ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆ
ಜೆರುಸಲೆಮ್/ನವದೆಹಲಿ, ಅ. 18 ಇಸ್ರೇಲ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ಪರ್ಯಾಯ ಪ್ರಧಾನಿ ಮತ್ತು ಇಸ್ರೇಲ್ ವಿದೇಶಾಂಗ ಸಚಿವ ಯಾರ್ ಲ್ಯಾಪಿಡ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಭಾರತದಲ್ಲಿನ ಇಸ್ರೇಲಿ ರಾಯಭಾರಿ ನೂರ್ ಗಿಲಾನ್ ಟ್ವೀಟ್ ಮಾಡಿದ್ದು, ಉಭಯ ಮಂತ್ರಿಗಳ ಭೇಟಿಯಿಂದ ಹಲವು ಪ್ರಾಯೋಗಿಕ ಕಾರ್ಯಸೂಚಿಗಳು ಹೊರಬರಲಿವೆ ಎಂದು ಹೇಳಿದ್ದಾರೆ.
"ಸಚಿವರ ನಡುವಿನ ಸಭೆಯಿಂದ ಅನೇಕ ಪ್ರಾಯೋಗಿಕ ಕಾರ್ಯಸೂಚಿಗಳು ಹೊರಬರುತ್ತವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜೈಶಂಕರ್ ಅವರು ಭಾನುವಾರ ಇಯೆರ್ ಲ್ಯಾಪಿಡ್ ಆಹ್ವಾನದ ಮೇರೆಗೆ ಇಸ್ರೇಲ್‌ಗೆ ಐದು ದಿನಗಳ ಅಧಿಕೃತ ಭೇಟಿ ನೀಡಿದ್ದು, ಈ ಅವಧಿಯಲ್ಲಿ ಅಧ್ಯಕ್ಷ ಐಸಾಕ್ ಹರ್ಜೋಗ್ ಮತ್ತು ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್ ಅವರನ್ನು ಭೇಟಿ ಮಾಡಲಿದ್ದಾರೆ.
ವಿದೇಶಾಂಗ ಸಚಿವರಾಗಿ ಇಸ್ರೇಲ್ ಗೆ ಜೈಶಂಕರ್ ಅವರ ಮೊದಲ ಭೇಟಿ ಇದಾಗಿದೆ.