ಅಂತರರಾಷ್ಟ್ರೀಯ

ಹುರಿಕೇನ್‌ ಇಡಾ ಚಂಡಮಾರುತದ ಹಾನಿ ಪರಿಶೀಲಿಸಲಿರುವ ಬೈಡೆನ್

ಹುರಿಕೇನ್‌ ಇಡಾ ಚಂಡಮಾರುತದ ಹಾನಿ ಪರಿಶೀಲಿಸಲಿರುವ ಬೈಡೆನ್

ವಾಷಿಂಗ್ಟನ್, ಸೆ 5 : ಹುರಿಕೇನ್ ಇಡಾ ಚಂಡಮಾರುತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್  ಮಂಗಳವಾರ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಶುಕ್ರವಾರ ಬೈಡೆನ್ ಆಗ್ನೇಯ ಅಮೆರಿಕ ರಾಜ್ಯ ಲೂಯಿಸಿಯಾನಕ್ಕೆ ಭೇಟಿ ನೀಡಿದರು. ಕಿಲ್ಲಿನ ನ್ಯೂ ಓರ್ಲಿಯನ್ಸ್ ನಗರವು ಈಗಲೂ ಚಂಡಮಾರುತದಿಂದ ಉಂಟಾದ ವಿದ್ಯುತ್ ಕೊರತೆಯಿಂದ ಬಳಲುತ್ತಿದೆ.

ಬೈಡೆನ್‌ ನ್ಯೂಯಾರ್ಕ್ನ ಕ್ವೀನ್ಸ್ ನಗರಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.. ಅಲ್ಲಿ ಧಾರಾಕಾರ ಮಳೆಯಿಂದ ಅಪಾರ್ಟ್‌ಮೆಂಟ್‌ಗಳ ನೆಲಮಾಳಿಗೆ ಪ್ರವಾಹಕ್ಕೆ ಸಿಲುಕಿದ್ದರಿಂದ ಹಲವಾರು ಜನರು ಸಾವನ್ನಪ್ಪಿದರು.  ಆದರೆ, ಶ್ವೇತಭವನ ಈ ಭೇಟಿಯ ಯಾವುದೇ ವಿವರಗಳನ್ನು ನೀಡಿಲ್ಲ.

ಚಂಡಮಾರುತದಿಂದ ಉಂಟಾದ ಮಳೆ ಮತ್ತು ಪ್ರವಾಹ ನ್ಯೂಜೆರ್ಸಿಯಲ್ಲಿ 23 ಜನರನ್ನು ಬಲಿ ತೆಗೆದುಕೊಂಡಿದೆ. ನ್ಯೂಯಾರ್ಕ್ ರಾಜ್ಯದಲ್ಲಿ ಸಾವಿನ ಸಂಖ್ಯೆ 15 ಆಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಸುದ್ದಿ ಓದಿ