ಅಂತರರಾಷ್ಟ್ರೀಯ

ಡಿ. 7 ರಂದು ಪುಟಿನ್ ಜೊತೆ ಬೈಡನ್‌ ವಿಡಿಯೋ ಕಾನ್ಫರೆನ್ಸ್‌ ಸಭೆ; ಶ್ವೇತಭವನ

ಡಿ. 7 ರಂದು  ಪುಟಿನ್  ಜೊತೆ   ಬೈಡನ್‌   ವಿಡಿಯೋ ಕಾನ್ಫರೆನ್ಸ್‌  ಸಭೆ;  ಶ್ವೇತಭವನ

ವಾಷಿಂಗ್ಟನ್, ಡಿ. 5: ಅಮೆರಿಕಾ   ಅಧ್ಯಕ್ಷ ಜೋ ಬೈಡನ್ ಅವರು  ಡಿಸೆಂಬರ್ 7 ರ  ಮಂಗಳವಾರ  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ  ವಿಡಿಯೋ ಕಾನ್ಫರೆನ್ಸ್‌  ಮೂಲಕ   ಮಾತುಕತೆ  ನಡೆಸಲಿದ್ದಾರೆ ಎಂದು  ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಖಚಿತಪಡಿಸಿದ್ದಾರೆ.

ಇಬ್ಬರೂ  ನಾಯಕರು     ಅಮೆರಿಕಾ - ರಷ್ಯಾ  ಬಾಂಧವ್ಯ,  ಕಾರ್ಯತಂತ್ರ   ಸ್ಥಿರತೆ,  ಸೈಬರ್,   ಪ್ರಾದೇಶಿಕ ಅಂಶಗಳು      ಸೇರಿದಂತೆ  ಹಲವಾರು  ವಿಷಯಗಳನ್ನು ಚರ್ಚಿಸುತ್ತಾರೆ.    ಉಕ್ರೇನ್ ಗಡಿಯಲ್ಲಿ ರಷ್ಯಾ  ಸೇನಾ  ಚಟುವಟಿಕೆಗಳ  ಬಗ್ಗೆ  ಅಮೆರಿಕಾದ   ಕಳವಳವನ್ನು   ಸಭೆಯಲ್ಲಿ   ಅಧ್ಯಕ್ಷ   ಬೈಡನ್‌   ಒತ್ತಿಹೇಳಲಿದ್ದಾರೆ.  ಉಕ್ರೇನ್‌ನ  ಸಾರ್ವಭೌಮತ್ವ  ಹಾಗೂ  ಪ್ರಾದೇಶಿಕ ಸಮಗ್ರತೆಗೆ    ಅಮೆರಿಕಾ   ಬೆಂಬಲವನ್ನು   ಪುನರುಚ್ಚರಿಸಲಿದ್ದಾರೆ  ಎಂದು  ಪ್ಸಾಕಿ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇದಕ್ಕೂ  ಮುನ್ನ     ಶನಿವಾರ,   ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್  ಸ್ಪುಟ್ನಿಕ್‌  ನೊಂದಿಗೆ  ಮಾತನಾಡಿ   ಪುಟಿನ್  ಹಾಗೂ   ಬೈಡನ್‌   ಮಂಗಳವಾರ ಸಂಜೆ  ವೀಡಿಯೊ  ಕಾನ್ಫರೆನ್ಸ್     ನಡೆಸಲಿದ್ದಾರೆ ಎಂದು ಹೇಳಿದರು.

ಈ ವಾರದ  ಆರಂಭದಲ್ಲಿ  ಉಕ್ರೇನ್  ಸಮಸ್ಯೆಯ  ಬಗ್ಗೆ ಪ್ರಶ್ನೆಯೊಂದಕ್ಕೆ  ಉತ್ತರಿಸಿದ್ದ  ಬೈಡೆನ್ ಅವರು ರಷ್ಯಾದ ಅಧ್ಯಕ್ಷರೊಂದಿಗೆ "ಸುದೀರ್ಘ ಚರ್ಚೆ"ಯನ್ನು  ತಾವು   ನಿರೀಕ್ಷಿಸುವುದಾಗಿತಿಳಿಸಿದ್ದರು.


ಸುದ್ದಿ ಓದಿ