ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಭಾರಿ ಬಾಡೂಟ ಸದ್ದು : ಊಟಕ್ಕಾಗಿ ಮುಗಿಬಿದ್ದ ಜನ, ಜಿಲ್ಲಾಧಿಕಾರಿ ಆದೇಶಕ್ಕು ಇಲ್ಲ ಇಲ್ಲಿ ಕಿಮ್ಮತ್ತು
ಬೆಳಗಾವಿ : ಈ ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ಗಿಪ್ಟ್ ನೀಡುವ ಮೂಲಕ ಸುದ್ದಿಯಾಗಿತ್ತು. ಆದರೆ ಕಾಂಗ್ರೆಸ್ ಸರದಿ ಇವಾಗ ಮುಗಿದಿದ್ದು, ಈಗೇನಿದ್ದರು ಬಿಜೆಪಿಪರ ಸಮಾವೇಶದಲ್ಲಿ ಭಾರಿ ಬಾಡೂಟ ಮಾಡಿಸುವ ಮೂಲಕ ಮತದಾರರನ್ನು ತನ್ನತ್ತ ಸೆಳೆಯುವ ತಂತ್ರ ನಡೆಯುತ್ತಿದೆ. ಇಂದಿನ ಸಮಾವೇಶದಲ್ಲಿ ಸುಮಾರು120 ಕೆಜಿ ಮಾಂಸದೊಂದಿಗೆ ಭಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಹೌದು ಓದುಗರೆ ಬೆಳಗಾವಿ ಗ್ರಾಮೀಣ ಮತಕ್ಷೆತ್ರದಲ್ಲಿ ಗಿಪ್ಟ್ ಪಾಲಿಟೆಕ್ಸ್ ಮಾಡುವ ಮೂಲಕ ಮತದಾರರಿಗೆ ಕುಕ್ಕರ್ ಸೇರಿದಂತೆ ಕೆಲವು ಬಗೆಯ ಕಾಣಿಕೆಗಳನ್ನು ಹಂಚಲಾಗಿತ್ತು. ಅದರಂತೆ ಇವಾಗ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಸಂತಿ ಬಸ್ತವಾಡ ಗ್ರಾಮದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ರಮೇಶ ಅವರ ಆಪ್ತನಾದ ನಾಗೇಶ ಮನ್ನೋಳಕರ್ ಅವರು ಎಸ್‌ಸಿ, ಎಸ್‌ಟಿ ಸಮಾವೇಶ ಹಮ್ಮಿಕೊಂಡಿದ್ದರು.
ಈ ಸಮಾವೇಶದಲ್ಲಿ ಸುಮಾರು 120 ಕೆ.ಜಿ ಮಾಂಸದ, 5 ಸಾವಿರ ಜನರ ಬಾಡೂಟ ತಯಾರಿಸಲಾಗಿತ್ತು. ಸಮಾವೇಶ ಬಳಿಕ ಜನರು ಬಾಡೂಟ ಸವಿಯಲು ಮುಗಿಬಿದ್ದ ದೃಶ್ಯಗಳು ಕಂಡು ಬಂದವು. ಸಂತಿ ಬಸ್ತವಾಡದಲ್ಲಿ ಬಾಡೂಟ ಸವಿಯಲು ಜನರ ನೂಕು ನುಗ್ಗಲು ಪ್ರಾರಂಭಿಸಿದ್ದರು.
ಸಮಾವೇಶ ವೇಳೆ ಬಾಡೂಟ ಆಯೋಜಿಸದಂತೆ ಚುನಾವಣೆ ಆಯೋಗ ನಿರ್ದೇಶನ ನೀಡಿದ್ದರೂ ಇಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದರೂ ಇಲ್ಲಿ ಸಮಾವೇಶ ಬಳಿಕ ಬಾಡೂಟವನ್ನು ರಮೇಶ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ್ ಆಯೋಜಿಸಿದ್ದರು. ಈ ವೇಳೆ ಸುಮಾರು 5 ಸಾವಿರ ಜನ ಬಾಡೂಟ ಸೇವಿಸಿದ್ದಾರೆ.
ಒಂದೇಡೆ ಚುನಾವಣಾ ಆಯೋಗ ಇದಕ್ಕೆ ನಿರ್ಬಂಧ ಹಾಕಲು ಮುಂದಾಗಿದ್ದರು ಇದು ಗ್ರಾಮೀಣ ಕ್ಷೇತ್ರದಲ್ಲಿ ನಿಲ್ಲುತ್ತಿಲ್ಲ. ಇದರಿಂದ ಜಿಲ್ಲಾಧಿಕಾರಿ ಗಳ ಆದೇಶಕ್ಕೆ ಇಲ್ಲಿ ಕಿಮ್ಮತ್ತು ಇಲ್ಲದಂತಾಗಿದೆ.