ಅಂತರರಾಷ್ಟ್ರೀಯ

‘ರಷ್ಯಾಕ್ಕೆ ಬೀಜಿಂಗ್ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿಲ್ಲ’ – ಚೀನಾದ ರಾಯಭಾರಿ

‘ರಷ್ಯಾಕ್ಕೆ ಬೀಜಿಂಗ್ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿಲ್ಲ’ – ಚೀನಾದ ರಾಯಭಾರಿ

ವಾಷಿಂಗ್ಟನ್:ಮಾರ್ಚ್ 21: ಉಕ್ರೇನ್ ಯುದ್ಧದ ಮಧ್ಯೆ ಬೀಜಿಂಗ್ ರಷ್ಯಾಕ್ಕೆ ಮಿಲಿಟರಿ ನೆರವು ನೀಡಿರುವುದನ್ನು ಯುಎಸ್‌ನಲ್ಲಿರುವ ಚೀನಾ ರಾಯಭಾರಿ ಕ್ವಿನ್ ಗ್ಯಾಂಗ್ ನಿರಾಕರಿಸಿದ್ದಾರೆ. ಕದನ ವಿರಾಮಕ್ಕೆ ಕರೆ ನೀಡುವ ಮೂಲಕ, ಶಾಂತಿ ಮಾತುಕತೆಗಳನ್ನು ಚೀನಾ ಉತ್ತೇಜಿಸುತ್ತಿದೆ. ಮತ್ತು ಮಾನವೀಯ ನೆರವು ಕಳುಹಿಸುವ ಮೂಲಕ ಬೀಜಿಂಗ್ ಯುದ್ಧದ ಕುರಿತು ಪ್ರತಿಕ್ರಿಯಿಸುತ್ತಿದೆ ಎಂದು ಹೇಳಿದ್ದಾರೆ.

ಕ್ವಿನ್ ಅವರನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿರುವ ಪ್ರಕಾರ, “ಶುಕ್ರವಾರ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಧ್ಯಕ್ಷ ಬಿಡೆನ್ ಅವರು ವೀಡಿಯೊ ಕರೆ ಸಂಭಾಷಣೆ ನಡೆಸಿದರು. ಈ ಸಮಯದಲ್ಲಿ, ಅಧ್ಯಕ್ಷ ಕ್ಸಿ ಚೀನಾದ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ, ಚೀನಾ ಶಾಂತಿಯ ಪರ ನಿಂತಿದೆ ಮತ್ತು ಯುದ್ಧ ವಿರೋಧಿಸುತ್ತದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ರಷ್ಯಾಕ್ಕೆ ಮಿಲಿಟರಿ ನೆರವು ಕಳುಹಿಸುವ ಚೀನಾದ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, “ಚೀನಾ ರಷ್ಯಾಕ್ಕೆ ಮಿಲಿಟರಿ ನೆರವು ನೀಡುತ್ತಿರುವ ಮಾಹಿತಿ ಸುಳ್ಳು. ನಾವು ಅದನ್ನು ನಿರಾಕರಿಸುತ್ತೇವೆ. ಚೀನಾ ಆಹಾರ, ಔಷಧ, ಹೊದಿಕೆಗಳನ್ನು ಕಳುಹಿಸುತ್ತಿದೆ” ಎಂದು ಹೇಳಿದರು.

“ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಈ ರೀತಿ ನೋಡುವುದಕ್ಕೆ ಚೀನಾ ದ್ವೇಷ ಮಾಡುತ್ತದೆ. ಎರಡೂ ರಾಷ್ಟ್ರಗಳ ಮಧ್ಯೆ ತಕ್ಷಣವೇ ಕದನ ವಿರಾಮವಾಗಬೇಕು. ಇದರೊಂದಿಗೆ ಚೀನಾ ಶಾಂತಿ ಮಾತುಕತೆಗಳನ್ನು ಉತ್ತೇಜಿಸುತ್ತದೆ. ಅಲ್ಲದೆ, ಮಾನವೀಯ ಸಹಾಯವನ್ನು ಪೂರೈಸುತ್ತಿದ್ದೇವೆ” ಎಂದು ಹೇಳಿದರು.

ಇದಕ್ಕೂ ಮುನ್ನ ಶುಕ್ರವಾರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಉಕ್ರೇನಿಯನ್ ನಗರಗಳು ಮತ್ತು ನಾಗರಿಕರ ಮೇಲೆ ದಾಳಿಯ ಮಧ್ಯೆ ರಷ್ಯಾಕ್ಕೆ ನೆರವು ನೀಡಿದ್ದಕ್ಕಾಗಿ ಕ್ಸಿ ಜಿನ್‌ಪಿಂಗ್‌ಗೆ ಭೀಕರ ಪರಿಣಾಮಗಳ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದ ಮೇಲೆ ಅಮೆರಿಕದಲ್ಲಿರುವ ಚೀನಾ ರಾಯಭಾರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿ ಓದಿ