ಶಿರಹಟ್ಟಿ

ಮಕ್ಕಳ ಹಕ್ಕುಗಳ ಬಗ್ಗೆ ಅರಿವಿರಲಿ: ಮರಿಗೌಡ ಸುರಕೋಡ

ಮಕ್ಕಳ ಹಕ್ಕುಗಳ ಬಗ್ಗೆ ಅರಿವಿರಲಿ: ಮರಿಗೌಡ ಸುರಕೋಡ


ಮಕ್ಕಳ ಹಕ್ಕುಗಳ ಬಗ್ಗೆ ಅರಿವಿರಲಿ: ಮರಿಗೌಡ ಸುರಕೋಡ 

ಶಿರಹಟ್ಟಿ 26: ಮಕ್ಕಳು ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಮೂಲ ಸಮಸ್ಯೆಗಳನ್ನು ಗೌಪ್ಯವಾಗಿಡದೇ ತಂದೆ ತಾಯಿ ಹಾಗೂ ಸಂಬಂಧಿಸಿದವರ ಹತ್ತಿರ ಮುಕ್ತವಾಗಿ ಮಾತನಾಡಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಅರಿಯಬೇಕು ಎಂದು ಡಿ. ದೇವರಾಜು ಅರಸು ಇಲಾಖೆಯ ತಾಲೂಕಾ ಕಲ್ಯಾಣಾಕಾರಿ ಮರಿಗೌಡ ಸುರಕೋಡ ಹೇಳಿದರು. 

ಶುಕ್ರವಾರ ಪಟ್ಟಣದ ಡಿ. ದೇವರಾಜು ಅರಸು ಭವನದಲ್ಲಿ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಹಾಗೂ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು 2024ರ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಬಾಲ್ಯ ವಿವಾಹ, ಲಿಂಗ ತಾರತಮ್ಯ, ದುರುಪಯೋಗ, ಬಾಲಕಾರ್ಮಿಕತೆ, ಲೈಂಗಿಕ ಕಿರುಕುಳ ಹಾಗೂ ಮಕ್ಕಳ ಸಾಗಾಣಿಕೆ ಬಗ್ಗೆ ವಿಷಯಗಳನ್ನು ಮುಚ್ಚಿಡುವಂತಹ ಕಾರ್ಯ ಮಾಡದೇ ನಿರ್ಭೀತಿಯಿಂದ ನಿಮ್ಮ ಮಕ್ಕಳ ಹಕ್ಕುಗಳನ್ನು ಅರಿತು ನಿಮ್ಮ ಹಕ್ಕುಗಳನ್ನು ಚಲಾಯಿಸಿ ಎಂದು ಸಲಹೆ ನೀಡಿದರು.  

ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಮಾಲೋಚನ ಸಭೆಯ ಕಾರ್ಯಕ್ರಮದಲ್ಲಿ ಆಸರೆ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಶಶಿಧರ ಶಿರಸಂಗಿ ಮಾತನಾಡಿ, ಇಂದಿನ ಮಕ್ಕಳ ಸಂಸತ್ತು ಚರ್ಚೆಯಲ್ಲಿ ನೀವುಗಳೆಲ್ಲರೂ ಸಕ್ರೀಯವಾಗಿ ಭಾಗವಹಿಸಿ ನಿಮ್ಮ ಸಮಸ್ಯೆಗಳ ಪಟ್ಟಿ ತಯಾರಿಸಿ, ಇಲ್ಲಿಂದ ಆಯ್ಕೆಗೊಂಡ 02 ಮಕ್ಕಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜರುಗುವ ಸಮಲೋಚನಾ ಸಭೆಯಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸಲು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಉತ್ತಮ ಭಾಗವಹಿಸುವಿಕೆ ಮೂಲಕ ಯಶಸ್ಸು ಕಾಣಬೇಕಾಗಿದ್ದು, ಕಾರಣ ನೀವು ರಾಜ್ಯದಲ್ಲಿರುವ ಎಲ್ಲ ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚರ್ಚಿಸಿ ಎಂದು ಹೇಳಿದರು.  

ಪತ್ರಕರ್ತ ಪ್ರಕಾಶ ಮೇಟಿ ಮಾತನಾಡಿ, ನೀವೆಲ್ಲರೂ ಕೋವಿಡೋತ್ತರ ಸಮಸ್ಯೆಗಳು ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಕ್ರೂಢೀಕರಿಸಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚಿಸಿ ರಾಜ್ಯದ ಎಲ್ಲ ಮಕ್ಕಳಿಗೆ ಅನುಕೂಲವಾಗುವಂತೆ ಕೆಲಸ ಮಾಡುವದರ ಜೊತೆಗೆ ಮಕ್ಕಳ ಹಕ್ಕುಗಳು ಹಾಗೂ ಸಂಸತ್ತಿನ ಬಗ್ಗೆ ವಿವರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಅಕ್ಬರ್ ಯಾದಗೀರಿ, ಪತ್ರಕರ್ತರಾದ ಮಂಜುನಾಥ ಅರೆಪಲ್ಲಿ, ಪ್ರದೀಪ ಗೊಡಚಪ್ಪನವರ, ವೀರೇಶ ಉಮನಾಬಾದಿ, ಗೌರೀಶ ನಾಗಶೆಟ್ಟಿ, ಬಸವರಾಜ ನವಲಗುಂದ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಂದ ಐವತ್ತಕ್ಕೂ ಹೆಚ್ಚು ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ