ಬಸವೇಶ್ವರ ಸಹಕಾರ ಸಂಘಕ್ಕೆ 15.11 ಲಕ್ಷ ನಿವ್ವಳ ಲಾಭ
ಚಿಕ್ಕೋಡಿ 02 :: ತಾಲೂಕಿನ ಕರೋಶಿ ಗ್ರಾಮದ ಶ್ರೀ ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘವು ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸ ಗಳಿಸುವುದರೊಂದಿಗೆ ಸಾಮಾಜಿಕ ಕಳಕಳಿಯನ್ನು ಕಾಪಾಡಿಕೊಂಡು ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಸ್ಥಾಪಕ ಅರುಣ ಕುಲಕರ್ಣಿ ಹೇಳಿದರು.
ಸಹಕಾರ ಸಂಘದ ಪ್ರಗತಿ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 15.11 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಒಟ್ಟು 1,028 ಸದಸ್ಯರಿದ್ದು, 36.69 ಲಕ್ಷ ಷೇರು ಬಂಡವಾಳ ಹೊಂದಿದೆ. 1.63 ಕೋಟಿ ನಿಧಿ ಹಾಗೂ 3.98 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಸದಸ್ಯರಿಗೆ 1.89 ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
ಅದೇ ರೀತಿ ಸಂಸ್ಥೆಯು 3.92 ಕೋಟಿ ಬ್ಯಾಂಕ್ ಠೇವಣಿ ಹಾಗೂ ಹೂಡಿಕೆ ಹೊಂದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 15,11,695 ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯ ಅತ್ಯುತ್ತಮ ಹಾಗೂ ಪಾರದರ್ಶಕ ಆರ್ಥಿಕ ನಿರ್ವಹಣೆಗೆ ನಿರಂತರವಾಗಿ ‘ಎ’ (ಂ) ಆಡಿಟ್ ವರ್ಗ ಲಭಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅರುಣ ಕುಲಕರ್ಣಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಅಸ್ಪಾಕ್ ಅಹ್ಮದ್ ಮಕಾಂದಾರ, ಉಪಾಧ್ಯಕ್ಷ ಸಾತಪ್ಪ ಮಡಿವಾಳ, ನಿರ್ದೇಶಕರಾದ ವಿಠೋಬ ಸಂತು ಜಾಧವ, ಬಾಬು ಈರ್ಪ ತೋಡಗಿ, ಮಾರುತಿ ಸದಾಶಿವ ಕಾಡಕರ್, ಬಸವರಾಜ ಶೆಟ್ಟೆಪ್ಪ ಹಳಿಸೋಳೆ, ವಸಂತ ಕಲ್ಲಪ್ಪ ಕುರುಬರ, ಮಹಮದ್ ಅಲಿ ಅಬ್ದುಲ್ ಮಜೀದ್ ಪಟೇಲ್, ಲತಾ ವಿಜಯ ಕುಲಕರ್ಣಿ, ವಿಮಲಾ ಬಾಬುರಾವ್ ಕೋಟಗಿ, ಆತ್ಮಾರಾಮ ಯಲೈಗೋಳ ಹಾಗೂ ಕಾರ್ಯದರ್ಶಿ ಗೋವಿಂದ ಜುಟಾಳೆ ಸೇರಿದಂತೆ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.