ಕುಷ್ಟಗಿ

29ರಿಂದ ಬಸವ ದರ್ಶನ ಪ್ರವಚನ ಕಾರ್ಯಕ್ರಮ

29ರಿಂದ ಬಸವ ದರ್ಶನ ಪ್ರವಚನ ಕಾರ್ಯಕ್ರಮ

ಲೋಕದರ್ಶನ ವರದಿ 

ಕುಷ್ಟಗಿ 24: ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ (ಕೇಸೂರ) ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹದಿನೈದು ದಿನಗಳ ಕಾಲ ಬಸವ ದರ್ಶನ ಪ್ರವಚನ ಕಾರ್ಯಕ್ರಮವನ್ನು ಹಾಗೂ ಪ್ರವಚನದ ಮಹಾ ಮಂಗಲೋತ್ಸವದಂದು ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವ (ವಿವಾಹ ಮಹೋತ್ಸವ) ಹಮ್ಮಿಕೊಳ್ಳಲಾಗಿದೆ ಎಂದು ಶಿವಾನಂದಯ್ಯ ಸರಗಣಚಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ಪ್ರವಚನ ಕಾರ್ಯಕ್ರಮವನ್ನು ಪ್ರವಚನಕಾರರಾದ ಬಿಜಾಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಹಿರೇಮಠದ ಶ್ರೀಷಬ್ರ108 ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನಡೆಸಿಕೊಡುತ್ತಾರೆ. 

ಪ್ರವಚನವು ಜು.29ರಿಂದ ಅ12ರವರೆಗೆ ಸಾಯಂಕಾಲ 7 ಗಂಟೆಯಿಂದ 8.30ರವರೆಗೂ ನಡೆಯುತ್ತದೆ. 

ಪ್ರವಚನ ಕಾರ್ಯಕ್ರಮದಲ್ಲಿ ತಬಲಾವಾದಕರಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇಲಕಲ್ಲಿನ ಜಗನ್ನಾಥ ಕೆಂದುಳಿ, ಸಂಗೀತ ಸೇವೆಯನ್ನು ಕನರ್ಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಇಲಕಲ್ಲಿನ ಕೃಷ್ಣಪ್ಪ ಬೆಣ್ಣೂರ ಅವರು ನಡೆಸಿಕೊಡುತ್ತಾರೆ. 

ಕಲ್ಯಾಣ ಮಹೋತ್ಸವಕ್ಕೆ ವಧು ವರರ ಹೆಸರನ್ನು ಸಮರ್ಪಕ ದಾಖಲೆಗಳೊಂದಿಗೆ ಅಗಸ್ಟ್ 7 ರ ಒಳಗಾಗಿ ಹೆಸರನ್ನು ನೋಂದಣಿಯನ್ನು ಮಾಡಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ  ರಾಜಶೇಖರ ಹೊಕ್ರಾಣಿ, ವೀರಯ್ಯ ಮಳಿಮಠ, ಶಿವರಾಜ ಅಂಗಡಿ, ಪರಶಿವಮೂತರ್ಿ ಮಾಟಲದಿನ್ನಿ, ಶರಣಪ್ಪ ಮೇಟಿ, ಕರಬಸಪ್ಪ ಪಟ್ಟಣಶೆಟ್ಟರ, (9742921503, 9972521961, 9731203325, 990041265,7406175925) ಇವರನ್ನು ಸಂಪಕರ್ಿಸಿ ಮಾಹಿತಿ ಪಡೆಯಬಹುದು ಎಂದು ಕಮಿಟಿಯವರು ತಿಳಿಸಿದ್ದಾರೆ 

ಸುದ್ದಿ ಓದಿ