ಬಿಜೆಪಿಯಿಂದ ಹೊಸ ಇತಿಹಾಸ ಸೃಷ್ಟಿಗೆ ಹುನ್ನಾರ : ಉರಿಗೌಡ ನಂಜೇಗೌಡ ಚಿತ್ರ ಜತೆ ಇತಿಹಾಸಕ್ಕೆ ಧಕ್ಕೆ ತರಲು ಯತ್ನ,, ಇದಕ್ಕೆ ಮಠಾಧೀಶರು ಧ್ವನಿ ಎತ್ತಲಿ : ಡಿಕೆಶಿ
ಬೆಳಗಾವಿ : ಬಿಜೆಪಿಯವರು ಟಿಪ್ಪು ಸೇರಿ ರಾಷ್ಟ್ರದ ಮಹಾನ ನಾಯಕರ ಚರಿತ್ರೆ ತಿರುಚಲು ಹೋರಟಿದ್ದಾರೆ. ಎರಡು ಶತಮಾನದ ಬಳಿಕ ಟಿಪ್ಪುವಿನ ಕುರಿತು ಚಿತ್ರ ತಯಾರಿಸಲು ಹೋರಟಿದ್ದಾರೆ. ಶೋಭಕ್ಕ, ಅಶ್ವಥ್ ನಾರಾಯಣ, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ. ಹೊಸದಾಗಿ 50 ಗ್ರಂಥಗಳು ಇವೆ. ಹೊಸದಾಗಿ ಉರಿಗೌಡ ನಂಜೇಗೌಡ ಸೃಷ್ಟಿಸಿ, ಜಾತಿ ಬಣ್ಣ ಕಟ್ಟುವ ಮೂಲಕ ಚಿತ್ರ ಮಾಡಲು ಹೋರಟಿದ್ದಾರೆ. ಇತಿಹಾಸ ಬದಲಾವಣೆ ಮಾಡಿ ಧಕ್ಕೆ ತರಲು ಹೊರಟಿರುವುದು ಸರಿಯಲ್ಲ. ಇದರ ವಿರುದ್ದ ಎಲ್ಲ ಮಠಾಧೀಶರು, ಕನ್ನಡಪರ ಹೋರಾಟಗಾರರು ಧ್ವನಿ ಎತ್ತುವ ಮೂಲಕ ಇತಿಹಾಸಕ್ಕೆ ಧಕ್ಕೆ ಬಾರದಂತೆ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದಿಲ್ಲಿ ಹೇಳಿದರು.
ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಿರ್ಮಲಾನಂದ ಶ್ರೀಗಳು ಹೋರಾಟದ ಮುಂದಾಳತ್ವ ವಹಿಸಬೇಕು. ಸಭೆ ಕರೆಯಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಎಲ್ಲಾ ಧರ್ಮದ ಶ್ರೀಗಳು ಇದರ ಮುಂದಾಳತ್ವ ವಹಿಸಬೇಕು. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸಕ್ಕೆ ಬಿಡಬಾರದು. ಬಿಜೆಪಿಯ ವಾಟ್ಸ್ ಆಪ್ ಯುನಿವರ್ಸಿಟಿ ಮೂಲಕ ಹೊಸ ಇತಿಹಾಸ ಬರೆಯುವುದನ್ನ ಖಂಡಿಸಬೇಕು. ಬಿಜೆಪಿಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸಕ್ಕೆ ಕಡಿವಾಣ ಹಾಕಬೇಕು.
ಈ ನಿಟ್ಟಿನಲ್ಲಿ ನಿರ್ಮಲಾನಂದ ಶ್ರೀಗಳು ಸಭೆಯನ್ನು ಕರೆಯಬೇಕು. ಸಂಧಾನದ ಮಾತುಕತೆ ಮಾಡಬಾರದು ಎಂದು ನಮ್ಮ ಒತ್ತಾಯ ಇದೆ. ಹೋರಾಟ ಮಾಡಬೇಕು, ಸಿಡಿದೇಳಬೇಕು ಎಂದು ಮನವಿ ಮಾಡುತ್ತೇನೆ. ಮಂಡ್ಯದಲ್ಲಿ ಯಾರೊಬ್ಬರು ಪುಸ್ತಕ ಬರೆದ್ರೆ ಅದು ಇತಿಹಾಸ ಆಗಲು ಸಾಧ್ಯವಿಲ್ಲ. 200 ವರ್ಷಗಳ ಹಿಂದೆ ನಡೆದ ಘಟನೆಗಳ ಇವೆ. ಉರಿಗೌಡ, ನಂಜೇಗೌಡ ಚಿತ್ರ ಸೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವವರ ಮೇಲೆ ಕೇಸ್ ಹಾಕಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಈ ದೇಶದ ಐಕ್ಯತೆ, ಶಾಂತಿ ಕದಡುತ್ತಿರುವ ಶೋಭಾ, ಸಿಟಿ ರವಿ ಹಿಂದು ವಿರೋಧಿಗಳು, ಒಕ್ಕಲುತನದ ವಿರೋಧಿಗಳು. ಸಂಘ ಸಂಸ್ಥೆಗಳು, ಸ್ವಾಮೀಜಿಗಳು ಹೋರಾಟದ ಮುಂದಾಳತ್ವ ಮೊದಲು ತೆಗೆದುಕೊಳ್ಳಬೇಕು. ಯಾರನ್ನೋ ಕರೆದು ಮಾತಾಡುವುದಲ್ಲ, ಎಲ್ಲಾ ಸ್ವಾಮೀಜಿಗಳು ಇದನ್ನ ಮುಂದಾಳತ್ವ ವಹಿಸಬೇಕು. ಅವರು ಚುನಾವಣೆ ಹೊಸ್ತಿಲಲ್ಲಿ ದ್ವಾರ ಯಾಕೆ ನಿರ್ಮಾಣ ಮಾಡಿದ್ರೂ. ಫಿಲಂ ಡೈರೆಕ್ಟರ್‍ಗಳು ಮಂತ್ರಿಗಳು ಸಿನೇಮಾ ಮಾದರಿಯಲ್ಲಿ ಸ್ಕ್ರಿಪ್ಟ್ ಬರಿತಾಯಿದ್ದಾರೆ. ಮಹಾರಾಜರ ತ್ಯಾಗ ಎನೂ, ಟಿಪ್ಪು ತ್ಯಾಗ ಎನೂ, ಧರ್ಮಗುರುಗಳ ತ್ಯಾಗ ಎನೂ ಎಲ್ಲವೂ ನಮಗೆ ಗೊತ್ತಿದೆ. ಸ್ವಾಮೀಜಿಗಳು ಹೋರಾಟ ಮಾಡದಿದ್ದರೆ ನಮ್ಮ ನಿರ್ಣಯ ತಿಳಿಸುತ್ತೇನೆ ಎಂದು ಡಿಕೆ ಶಿವಕುಮಾರ್ ನುಡಿದರು.
ಭಾರತ ಜೋಡೊ ಯಾತ್ರೆ ಬಳಿಕ ರಾಹುಲ್ ಗಾಂಧಿ ಬೆಳಗಾವಿಯಲ್ಲಿ ಮೊದಲ ಸಭೆ ನಡೆಸುತ್ತಿದ್ದಾರೆ. ಇಂದು ಒಂದು ಐತಿಹಾಸಿಕ ದಿನ, ಯುವ ಕ್ರಾಂತಿ ಸಮಾವೇಶ ಮಾಡುತ್ತಿದ್ದೇವೆ. ರಾಜ್ಯದಲ್ಲಿ, ದೇಶದಲ್ಲಿ ಬದಲಾವಣೆ ಆಗಲು ಯುವಕರಿಗೆ ಕರೆ ಕೊಡಲು ಬರ್ತಿದ್ದಾರೆ. ಯುವಕರು, ಮಹಿಳೆಯರು ಒಗ್ಗಾಟಾದಾಗ ಇಡೀ ರಾಷ್ಟ್ರದಲ್ಲಿ ಬದಲಾವಣೆ ಆಗಿದೆ.
ಯುವ ಕ್ರಾಂತಿ ಕಾರ್ಯಕ್ರಮ ಘೋಷಣೆ ಮಾಡಿದಾಗ ಮುಖ್ಯಮಂತ್ರಿಗಳು ಕೂಡ ಹೊಸ ಯೋಜನೆಗೆ ಬಗ್ಗೆ ಚಿಂತನೆ ಮಾಡ್ತಿದ್ದಾರೆ. ಮಹಿಳೆಯರಿಗಾಗಿ ಪ್ರಿಯಾಂಕಾ ಗಾಂಧಿ ಗ್ಯಾರಂಟಿಯನ್ನ ಘೋಷಣೆ ಮಾಡಿದ್ರೂ. ಮಹಿಳೆಯರಿಗೆ ಅನೇಕ ಯೋಜನೆಗಳನ್ನ ಸರ್ಕಾರದ ಪರ ಘೋಷಣೆ ಮಾಡಿದ್ರೂ. ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ರೂ, ಮಾಡಲಿ. ಟೀಕೆ ಮಾಡುವ ಎಲ್ಲಾ ಹಕ್ಕು ಅವರಿಗೆ ಇದೆ ಧನ್ಯವಾದ ಹೇಳ್ತೆನಿ.
ನಾಲ್ಕು ವರ್ಷ ಸರ್ಕಾರ ನಡೆಸಿ ಚುನಾವಣಾ ಪೂರ್ವದಲ್ಲಿ ಆರನೂರ ಭರವಸೆ ನೀಡಿದ್ರೂ. ಕಾಂಗ್ರೆಸ್ ಪಕ್ಷ ಯಾವ ವಿಚಾರದಲ್ಲಿ ಯೋಚನೆ ಮಾಡುತ್ತೆ ನಮ್ಮನ್ನ ಅವರು ಪಾಲೋ ಮಾಡ್ತಾರೆ. ಮಹಿಳೆಯರ ಬಗ್ಗೆ ಯೋಚನೆ ಮಾಡಿದ್ವಿ, ಅದರ ಬಗ್ಗೆ ಯೋಚನೆ ಮಾಡಿದ್ರೂ. ರೈತರಿಗೆ ಬೆಂಬಲ ಕೊಡ್ತೇನಿ ಅಂದ್ರೂ ಕೊಡಲಿಲ್ಲ, ನಾವು ಹೇಳಿದ ಮೇಲೆ ಅವರು ಮಾಡಿದ್ರೂ. ಈ ಸರ್ಕಾರದಲ್ಲಿ ಯೋಜನೆಗಳ ದಿಕ್ಸೂಚಿ ನಾವು ಪಿಕ್ಸ್ ಮಾಡ್ತಿದ್ದೇವೆ ಅವರು ಮಾಡ್ತಿದ್ದಾರೆ.
ಈ ದೇಶದಲ್ಲೇ ಭ್ರಷ್ಟಾಚಾರ ಸರ್ಕಾರ ಅನ್ನೋ ಬಿರುದು ಪಡೆದುಕೊಂಡಿದ್ದಾರೆ. ಶಾಸಕರೇ ಏಜೆಂಟ್ ಆಗಿದ್ದುಕೊಂಡು ಭ್ರಷ್ಟಾಚಾರ ಮಾಡ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರ ಇದ್ದಾಗ ಘೋಷಣೆ ಮಾಡದವರೂ ಈಗ ಮಾಡಿದ್ರೇ ಎನೂ ಪ್ರಯೋಜನ ಎಂದರು. ಈ ಸಂದರ್ಭದಲ್ಲಿ ವಿನಯ ನಾವಲಗಟ್ಟಿ ಸೇರಿ ಅನೇಕರು ಉಪಸ್ಥಿತರಿದ್ದರು.