ಬಿಡಿಸಿಸಿ ಬ್ಯಾಂಕ್ ಚುನಾವಣೆ: ಬಸವರಾಜ ಪಾಟೀಲ ಕಣದಿಂದ ನಿವೃತ್ತಿ
ರಬಕವಿ-ಬನಹಟ್ಟಿ ನವೆಂಬರ್ 04: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ರಬಕವಿ-ಬನಹಟ್ಟಿ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಮಹಾಲಿಂಗಪೂರದ ಬಸವರಾಜ ಮಹಾಲಿಂಗಪ್ಪ ಪಾಟೀಲ ಅವರು ಸ್ಪರ್ಧಿಸಿದ್ದರು.
ಶಾಸಕ ಸಿದ್ದು ಸವದಿಯವರಿಗೆ ಬೆಂಬಲ ವ್ಯಕ್ತ ಪಡಿಸಿ, ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಕ್ಷೇತ್ರದ ಮತದಾರ ಬಾಂಧವರು ಶಾಸಕ ಸಿದ್ದು ಸವದಿಯವರ ಚುನಾವಣಾ ಗುರ್ತಾದ ಅಟೋ ರಿಕ್ಷಾಗೆ ಮತವನ್ನು ನೀಡಿ, ಆಯ್ಕೆ ಮಾಡಬೇಕೆಂದು ಬಸವರಾಜ ಮಹಾಲಿಂಗಪ್ಪ ಪಾಟೀಲ ವಿನಂತಿಸಿದ್ದಾರೆ.