ಅಂತರರಾಷ್ಟ್ರೀಯ

ಇತಿಹಾಸದ ಸನಿಹದಲ್ಲಿ ಎಡವಿದ ಜೋಕೊ, ಮೆಡ್ವೆಡೆವ್ಗೆ ಪ್ರಶಸ್ತಿ

ಇತಿಹಾಸದ ಸನಿಹದಲ್ಲಿ ಎಡವಿದ ಜೋಕೊ, ಮೆಡ್ವೆಡೆವ್ಗೆ ಪ್ರಶಸ್ತಿ

ನ್ಯೂಯರ್ಕ್, ಸೆ.13: ಯುಎಸ್ ಓಪನ್ ನ ಫೈನಲ್ ನಲ್ಲಿ ವಿಶ್ವದ ನಂಬರ್ ಒನ್ ಸೆರ್ಬಿಯಾದ ನೊವಾಕ್ ಜೊಕೊವಿಚ್ ಇತಿಹಾಸ ಸನಿಹದಲ್ಲಿ ಎಡವಿದ್ದಾರೆ. ವರ್ಷದ ನಾಲ್ಕೂ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಬೀಗುವ ನೋವಾಕ್ ಆಸೆಗೆ ಎರಡನೇ ಶ್ರೇಯಾಂಕಿತ ಆಟಗಾರ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಪೆಟ್ಟು ನೀಡಿದ್ದಾರೆ. 

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಜೋಕೊ ಅವರನ್ನು ಮೂರು ನೇರ ಸೆಟ್ ಗಳಲ್ಲಿ ಮಣಿಸಿದ ರಷ್ಯಾದ ಸ್ಟಾರ್ ಆಟಗಾರ ಅಬ್ಬರಿಸಿದರು. ಇವರು 6-4, 6-4, 6-4 ರಿಂದ ವಿಶ್ವದ ನಂಬರ್ ಒನ್ ಆಟಗಾರನನ್ನು ಎರಡು ಗಂಟೆ 15 ನಿಮಿಷದ ಕಾದಾಟದಲ್ಲಿ ಮಣಿಸಿದರು. 

ಈ ವರ್ಷದ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ರಷ್ಯಾ ಆಟಗಾರನನ್ನು ಮಣಿಸಿದ್ದರು. ಮೆಡ್ವೆಡೆವ್‌ಗೆ ಇದು ಮೊದಲ ಗ್ರ್ಯಾನ್ ಸ್ಲಾಮ್ ಗೆಲುವು. ರಷ್ಯಾದ ಟೆನಿಸ್ ಆಟಗಾರ ಭಾನುವಾರ ತಮ್ಮ ವೃತ್ತಿಜೀವನದ ಮೂರನೇ ಗ್ರ್ಯಾನ್ ಸ್ಲಾಮ್ ಫೈನಲ್‌ನಲ್ಲಿ ಆಡಿದ್ದರು. 

ಜೊಕೊವಿಚ್ ಶುಕ್ರವಾರ ಜರ್ಮನಿಯ ಅಲೆಕ್ಸಿ ಜ್ವೆರೆವ್ ಅವರನ್ನು ಸೋಲಿಸಿ ಯುಎಸ್ ಓಪನ್ ಫೈನಲ್ ತಲುಪಿದ್ದರು. ಅವರು 9 ನೇ ಬಾರಿಗೆ ಈ ಪಂದ್ಯಾವಳಿಯ ಫೈನಲ್ ತಲುಪಿದ್ದಾರೆ. ಇದು ಒಟ್ಟಾರೆ ಅವರ ವೃತ್ತಿಜೀವನದ 31 ನೇ ಗ್ರ್ಯಾನ್ ಸ್ಲಾಮ್ ಫೈನಲ್ ಆಗಿದ್ದು, ಜೊಕೊವಿಕ್ ಮೂರು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿದ್ದಾರೆ.

  

ಸುದ್ದಿ ಓದಿ