ಇರಾನ್ ನ್ಯೂಕ್ಲಿಯರ್ ಪ್ರೋಗ್ರಾಂ : ಆಸ್ಟಿನ್, ಬೆನೆಟ್ ಚರ್ಚೆ
ವಾಷಿಂಗ್ಟನ್, ಆಗಸ್ಟ್ 26: ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಇರಾನ್‌ನ ಪರಮಾಣು ಕಾರ್ಯಕ್ರಮ, ಮಧ್ಯಪ್ರಾಚ್ಯದ ಮಿಲಿಟಿಯಾ ಗುಂಪುಗಳ ಬೆಂಬಲ ಮತ್ತು ಅದರ ಕಡಲ ಚಟುವಟಿಕೆ ಕುರಿತು ಚರ್ಚಿಸಿದರು ಎಂದು ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. "ವಾಷಿಂಗ್ಟನ್, ಡಿಸಿ ಯಲ್ಲಿ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ. ಆಸ್ಟಿನ್ 3 ಅವರು ಇಸ್ರೇಲಿ ಪ್ರಧಾನಿ ನಾಫ್ತಾಲಿ ಬೆನೆಟ್ ಅವರನ್ನು ಭೇಟಿಯಾಗಿ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಪ್ರಾದೇಶಿಕ ಭದ್ರತಾ ಸವಾಲುಗಳನ್ನು ಒಟ್ಟಾಗಿ ಪರಿಹರಿಸಲು ಅಮೆರಿಕ ಬದ್ಧತೆಯನ್ನು ದೃಢೀಕರಿಸುವ ಬಗ್ಗೆ ಚರ್ಚಿಸಿದ್ದಾರೆ" ಎಂದು ಕಿರ್ಬಿ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಇರಾನ್‌ನ ಪರಮಾಣು ಕಾರ್ಯಕ್ರಮ, ಭಯೋತ್ಪಾದನೆಯ ಬೆಂಬಲ ಮತ್ತು ಕಡಲ ಆಕ್ರಮಣದಿಂದ ಉಂಟಾದ ವ್ಯಾಪಕ ಶ್ರೇಣಿಯ ಬೆದರಿಕೆಗಳನ್ನು ನಾಯಕರು ಚರ್ಚಿಸಿದ್ದಾರೆ”
ಆಸ್ಟಿನ್ ಮಧ್ಯಪ್ರಾಚ್ಯವನ್ನು ಸ್ಥಿರಗೊಳಿಸಲು ಅಮೆರಿಕ ಮಿಲಿಟರಿ ಸಹಕಾರದ ಮೂಲಕ ಬದ್ಧತೆಯನ್ನು ಒತ್ತಿ ಹೇಳಿದೆ. ಆಸ್ಟಿನ್ ಮತ್ತು ಬೆನೆಟ್ ಅವರು ಅಮರಿಕ ಮತ್ತು ಇಸ್ರೇಲ್ ಕ್ಷೇತ್ರದ ವಾಯು ಹಾಗೂ ಕ್ಷಿಪಣಿ ರಕ್ಷಣೆಯಲ್ಲಿ ಸಹಕರಿಸಲು ಒಪ್ಪಿಕೊಂಡರು. ಈ ಪ್ರದೇಶದಲ್ಲಿ ಇಸ್ರೇಲ್ ನ ಸೇನಾ ಅಂಚನ್ನು ಕಾಯ್ದುಕೊಳ್ಳಲು ಅಮೆರಿಕದ ಬದ್ಧತೆಯನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪುನರುಚ್ಚರಿಸಿದರು ಎಂದು ಕಿರ್ಬಿ ಹೇಳಿದ್ದಾರೆ. ಬೆನೆಟ್ ಅವರು ಬುಧವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾಗಲಿದ್ದಾರೆ.