ಅಗಷ್ಟನಲ್ಲಿ ನಡೆದಿದ್ದ ಕೊಲೆ ಪ್ರಕರಣ : ಮಹಾರಾಷ್ಟ್ರದ ವಿಶಾಲಗಡ ಕಣಿವೆಯಲ್ಲಿ ಅವಶೇಷಗಳು ಪತ್ತೆ, ಹಾರೂಗೇರಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ

ಅಗಷ್ಟನಲ್ಲಿ ನಡೆದಿದ್ದ ಕೊಲೆ ಪ್ರಕರಣ : ಮಹಾರಾಷ್ಟ್ರದ ವಿಶಾಲಗಡ ಕಣಿವೆಯಲ್ಲಿ ಅವಶೇಷಗಳು ಪತ್ತೆ, ಹಾರೂಗೇರಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ

ಬೆಳಗಾವಿ : ಜಿಲ್ಲೆಯ ಹಾರೂಗೇರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಅಗಷ್ಟ್ 2022ರಲ್ಲಿ ನಡೆದಿದ್ದ ವ್ಯಕ್ತಿ ಯೊಬ್ಬರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಹಾರಾಷ್ಟ್ರದ ವಿಶಾಲಗಡ ಕಣಿವೆಯಲ್ಲಿ ಮೃತದೇಹದ ಅವಶೇಷಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಸೇರಿ ಒಟ್ಟು 6 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನು ಹಲವರ ಬಂಧನಕ್ಕೆ ಜಾಲ ಬೀಸಲಾಗಿದೆ. ಆದರೆ ಹಾರೋಗೇರಿ ಪೊಲೀಸರ ಈ ಪತ್ತೆ ಕಾರ್ಯಕ್ಕೆ ಪ್ರಶಂಶನೀಯ ವ್ಯಕ್ತವಾಗತೋಡಗಿದೆ.


    ಆಗಸ್ಟ್ 2022ರಲ್ಲಿ ಜಿಲ್ಲೆಯ ಹಾರೋಗೇರಿಯಲ್ಲಿ ನಡೆದ ಪುರಷನ ಕೊಲೆ ಪ್ರಕರಣದಲ್ಲಿ ಇದುವರೆಗೆ 6 ಮಂದಿಯನ್ನು ಬಂಧಿಸಿರುವ ಹಾರೋಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆದರೆ ದುರ್ಧೈವದ ಸಂಗತಿ ಏನೇಂದರೆ ಮೃತರ ಸಹೋದರ ಕೂಡಾ ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಈಗ ಪೊಲೀಸ ಅತಿಥಿಯಾಗಿರುವದು. ಅಲ್ಲದೆ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ವಿರುದ್ಧ 20 ಪ್ರಕರಣಗಳು ದಾಖಲಾಗಿವೆ.


    ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂಳಿದ ಆರೋಪಿಗಳನ್ನು ಬಂಧಿಸಲು ತಂಡಗಳು ಹೊರಟಿವೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಸುದ್ದಿ ಓದಿ