ಅಂತರರಾಷ್ಟ್ರೀಯ

ಮಾಲಿಯಲ್ಲಿ ಭಯೋತ್ಪಾದಕರ ದಾಳಿ - ಕನಿಷ್ಠ 31 ಜನರು ಸಾವು

ಮಾಲಿಯಲ್ಲಿ    ಭಯೋತ್ಪಾದಕರ  ದಾಳಿ -  ಕನಿಷ್ಠ 31 ಜನರು ಸಾವು

ಬಮಾಕೊ, ಡಿ.4: ಮಾಲಿಯಲ್ಲಿ  ಬಸ್ಸೊಂದರ   ಮೇಲೆ  ಭಯೋತ್ಪಾದಕರು  ನಡೆಸಿದ ದಾಳಿಯ  ಪರಿಣಾಮ    ಕನಿಷ್ಠ 31 ಮಂದಿ  ಸಾವನ್ನಪ್ಪಿ,  ಎಂಟು ಮಂದಿ  ಗಾಯಗೊಂಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಭಯೋತ್ಪಾದಕ    ದಾಳಿಯು  ಪೂರ್ವ ಮಾಲಿಯ   ಪಟ್ಟಣವಾದ ಬಂಡಿಯಾಗರಾ, ಮೋಪ್ಟಿ ಪ್ರದೇಶದಲ್ಲಿ   ನಡೆದಿದೆ  ಎಂದು ಮೂಲಗಳು  ಹೇಳಿವೆ 

2012 ರಲ್ಲಿ ಟುವಾರೆಗ್   ಬಂಡುಕೋರರು    ದೇಶದ  ಉತ್ತರ ಭಾಗದಲ್ಲಿ ವಿಶಾಲ  ಪ್ರದೇಶಗಳನ್ನು ವಶಪಡಿಸಿಕೊಂಡಂದಿನಿಂದ    ಮಾಲಿಯಲ್ಲಿ  ಪರಿಸ್ಥಿತಿ ಅಸ್ಥಿರಗೊಂಡಿದೆ.    ಇಸ್ಲಾಮಿಸ್ಟ್‌ಗಳ  ಚಟುವಟಿಕೆಗಳು, ಲಿಬಿಯಾದ  ಮಾಜಿ ನಾಯಕ ಮುಅಮ್ಮರ್ ಗಡಾಫಿಗೆ ನಿಷ್ಠರಾಗಿರುವ ಶಕ್ತಿಗಳು ಹಾಗೂ  ಫ್ರೆಂಚ್ ಹಸ್ತಕ್ಷೇಪದಿಂದಾಗಿ   ದೇಶದಲ್ಲಿ  ಸಂಘರ್ಷ  ಮತ್ತಷ್ಟು   ತೀವ್ರಗೊಂಡಿದೆ.

ಸುದ್ದಿ ಓದಿ