ಅಂತರರಾಷ್ಟ್ರೀಯ

ಬ್ರಿಟನ್‌ ಸಂಸದನ ಹತ್ಯೆ ಭಯೋತ್ಪಾದಕ ದಾಳಿ; ಪೊಲೀಸ್‌

ಬ್ರಿಟನ್‌  ಸಂಸದನ  ಹತ್ಯೆ  ಭಯೋತ್ಪಾದಕ  ದಾಳಿ;  ಪೊಲೀಸ್‌

ಲಂಡನ್‌, ಅ 16:     ಬ್ರಿಟನ್     ಆಡಳಿತಾರೂಢ    ಕನ್ಸರ್ವೇಟಿವ್‌  ಪಕ್ಷದ  ಸಂಸದ  ಡೇವಿಸ್‌   ಅಮೀಸ್‌   ಅವರ  ಹತ್ಯೆ    ಭಯೋತ್ಪಾದಕ  ದಾಳಿ   ಎಂದು   ಮೆಟ್ರೋಪಾಲಿನ್‌  ಪೊಲೀಸರು ಹೇಳಿದ್ದಾರೆ.

ಸಂಸದ     ಡೇವಿಡ್‌   ಅಮೀಸ್‌    ಶುಕ್ರವಾರ    ತಮ್ಮ  ಸಂಸತ್‌     ಕ್ಷೇತ್ರದ ಮತದಾರರೊಂದಿಗೆ   ಬೆಲ್ಫೇರ್ಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ಸಭೆ ನಡೆಸುತ್ತಿದ್ದಾಗ, ಸಭೆಯಲ್ಲಿ ಪಾಲ್ಗೊಂಡಿದ್ದ   25 ವರ್ಷದ   ಶಂಕಿತ   ಏಕಾ ಏಕಿ  ಅಮೀಸ್‌  ಅವರ  ಮೇಲೆ   ದಾಳಿ ನಡೆಸಿ ಚಾಕುವಿನಿಂದ ಹಲವು ಬಾರಿ ಇರಿದಿದ್ದ,

ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಡೇವಿಡ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾದರು. ಘಟನೆ ಸಂಬಂಧ 25 ವರ್ಷದ ಯುವಕನನ್ನು  ಬಂಧಿಸಿರುವ   ಪೊಲೀಸರು ದಾಳಿಕೋರನ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಚಾಕು  ಇರಿತ   ಘಟನೆ   ಭಯೋತ್ಪಾದಕ   ಕೃತ್ಯ ಎಂದು   ಪ್ರಕರಣದ  ತನಿಖೆ  ನಡೆಸುತ್ತಿರುವ   ಭಯೋತ್ಪಾದನೆ ನಿಗ್ರಹ ಪೊಲೀಸ್‌ ದಳ   ಹೇಳಿದೆ. ಈ ಸಂಬಂಧ    ಪೊಲೀಸರು  ಶುಕ್ರವಾರ ತಡ ರಾತ್ರಿ   ಹೇಳಿಕೆ ಬಿಡುಗಡೆಮಾಡಿದ್ದಾರೆ.

ಶಂಕಿತ   ದಾಳಿ ಕೋರ  ಬ್ರಿಟನ್‌ ನಾಗರೀಕನಾಗಿದ್ದು,  ಇಸ್ಲಾಮಿಕ್‌  ತೀವ್ರವಾದಿಗಳೊಂದಿಗೆ  ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದು,   ಏಕಾಂಗಿಯಾಗಿ  ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.


ಸುದ್ದಿ ಓದಿ