ಕ್ರೀಡೆ

ಅಸ್ಮಿತಾ ಮಹಿಳಾ ಸೈಕ್ಲಿಂಗ್ ಲೀಗ್ ಸ್ಪರ್ಧೆ

ಅಸ್ಮಿತಾ ಮಹಿಳಾ ಸೈಕ್ಲಿಂಗ್ ಲೀಗ್ ಸ್ಪರ್ಧೆ

ಜಮಖಂಡಿ 14: ನಗರದ ಆಲಗೂರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಅಸ್ಮಿತಾ ಮಹಿಳಾ ಸೈಕ್ಲಿಂಗ್ ಲೀಗ್ ಸ್ಪರ್ಧೆ ಜರುಗಿತು. ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು, ಅಸ್ಮಿತಾ ಮಹಿಳಾ ಸೈಕ್ಲಿಂಗ್ ಲೀಗ್ ಸ್ಪರ್ಧೆ ಚಾಲನೆ ನೀಡಿದರು. ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮುತ್ತಣ್ಣ ಮೇತ್ರಿ ಹಾಗೂ ದೈಹಿಕ ಶಿಕ್ಷಣ ಪರೀವೀಕ್ಷಕ ಪಂಚಾಶ್ರೀ ನಂದೀಶ ಧ್ವಜ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳಾ ಸೈಕ್ಲಿಸ್ಟ್‌ಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು. ಮಹಿಳೆಯರಲ್ಲಿ ಕ್ರೀಡಾ ಮನೋಭಾವ, ದೈಹಿಕ ಸದೃಢತೆ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 

20 ಕಿ.ಮೀ. ಮಹಿಳಾ ಎಲೈಟ್ (ನಾನ್‌-ಪ್ರೊಫೆಷನಲ್) ವಿಭಾಗದಲ್ಲಿ ಶೈಲಾ ನ್ಯಾಮಗೌಡರ ಪ್ರಥಮ, ಐಶ್ವರ್ಯ ಅತಣಿಕರ ದ್ವಿತೀಯ ಹಾಗೂ ಲಕ್ಷ್ಮೀ ಕುರಣಿ ತೃತೀಯ ಸ್ಥಾನ ಪಡೆದರು. 

20 ಕಿ.ಮೀ. ಮಹಿಳಾ ಎಲೈಟ್ (ಪ್ರೊಫೆಷನಲ್) ವಿಭಾಗದಲ್ಲಿ ಪೂಜಾ ಮಠಪತಿ ಪ್ರಥಮ, ಆಯೇಶಾ ಮೊಮಿನ್ ದ್ವಿತೀಯ ಹಾಗೂ ನಿವೇದಿತಾ ಕೋಕ್ಕಣವರ ತೃತೀಯ ಸ್ಥಾನ ಗಳಿಸಿದರು. 

18 ವರ್ಷದೊಳಗಿನ ಬಾಲಕಿಯರ 15 ಕಿ.ಮೀ. ವಿಭಾಗದಲ್ಲಿ ಶ್ರೇಯಾ ಚೌಗಲೆ ಪ್ರಥಮ, ಗಾಯತ್ರಿ ಕಿತ್ತೂರ ದ್ವಿತೀಯ ಹಾಗೂ ಸಾವಿತ್ರಿ ರೂಗಿ ತೃತೀಯ ಸ್ಥಾನ ಪಡೆದರು. 

14 ಮತ್ತು 16 ವರ್ಷದೊಳಗಿನ ವೃತ್ತಿಪರ ವಿಭಾಗದ 10 ಕಿ.ಮೀ. ಸ್ಪರ್ಧೆಯಲ್ಲಿ ನಂದಿನಿ ಲಮಾನಿ ಪ್ರಥಮ, ವಿದ್ಯಾ ಲಮಾನಿ ದ್ವಿತೀಯ ಹಾಗೂ ಸಹನಾ ಮುತ್ತಳ ತೃತೀಯ ಸ್ಥಾನ ಪಡೆದರು. 

14 ಮತ್ತು 16 ವರ್ಷದೊಳಗಿನ ಅವೃತ್ತಿಪರ ವಿಭಾಗದ 10 ಕಿ.ಮೀ. ಸ್ಪರ್ಧೆಯಲ್ಲಿ ಕೃತಿಕಾ ಭಾವಿಕಟ್ಟಿ ಪ್ರಥಮ, ತಹಜೇಬ್ ಆರ್‌. ಶೇಖ್ ದ್ವಿತೀಯ ಹಾಗೂ ಸಹನಾ ನರಸಗೊಂಡ ತೃತೀಯ ಸ್ಥಾನ ಪಡೆದು ಪಡೆದುಕೊಂಡರು. 

ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು. ಸೈಕ್ಲಿಂಗ್ ಕ್ರೀಡೆಯು ಆರೋಗ್ಯ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಸಹಕಾರಿಯಾಗಿದ್ದು, ಇಂತಹ ಸ್ಪರ್ಧೆಗಳು ಗ್ರಾಮೀಣ ಹಾಗೂ ನಗರ ಭಾಗದ ಮಹಿಳೆಯರಲ್ಲಿ ಕ್ರೀಡಾ ಆಸಕ್ತಿ ಬೆಳೆಸಲು ನೆರವಾಗುತ್ತವೆ ಎಂದು ಗಣ್ಯರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎಎಸ್‌ಐ ಭೀಮಸಿ ಮದರಖಂಡಿ, ಆರ್‌.ಡಿ. ಚವ್ಹಾಣ, ಅನೀತಾ ನಿಂಬರಗಿ, ಪಿ.ಬಿ. ಗುದಗಿ, ನಾಗಪ್ಪ ಹೆಗಡೆ, ಮಹಾದೇವ ಕುರಣಿ, ದಶರಥ ಹಿರೇಕುರಬರ, ಸದಾಶಿವ ಗೊಂಗಗೊಳ, ಗೀರೀಶ ಬುದಿಹಾಳ, ಜಿನ್ನಪ್ಪ ಆಲಗೂರ, ಮಂಜು ಹಾರುಗೇರಿ, ಆಕಾಶ ಮೇತ್ರಿ, ಸಿದ್ದಪ್ಪ ಚಿಕ್ಕಲಕಿ, ಸದಾಶಿವ ಕುರಣಿ, ಸಿದ್ದು ಕುರಣಿ, ಎಲ್‌.ಬಿ. ಹೊಸೂರು ಸೇರಿದಂತೆ ಅನೇಕ ಗಣ್ಯರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ