ಅಂತರರಾಷ್ಟ್ರೀಯ

ಆರೂಜ್ ಅಫ್ತಾಬ್ ಗ್ರ್ಯಾಮಿ ಪ್ರಶಸ್ತಿ ಪಡೆದ ಮೊದಲ ಪಾಕಿಸ್ತಾನಿ ಮಹಿಳೆ

ಆರೂಜ್ ಅಫ್ತಾಬ್ ಗ್ರ್ಯಾಮಿ ಪ್ರಶಸ್ತಿ ಪಡೆದ ಮೊದಲ ಪಾಕಿಸ್ತಾನಿ ಮಹಿಳೆ

ಲಾಸ್ ವೇಗಾಸ್: ಏಪ್ರಿಲ್ 04:ಬ್ರೂಕ್ಲಿನ್ ಮೂಲದ ಪಾಕಿಸ್ತಾನಿ ಗಾಯಕಿ ಅರೂಜ್ ಅಫ್ತಾಬ್ ಅವರು ಭಾನುವಾರ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಆರೂಜ್ ಪ್ರತಿಷ್ಠಿತ ಟ್ರೋಫಿಯನ್ನು ಪಡೆದ ಮೊದಲ ಪಾಕಿಸ್ತಾನಿ ಮಹಿಳೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅರೋಜ್ ಅವರು ತಮ್ಮ `ಮೊಹಬ್ಬತ್ ಹಾಡಿಗೆ ಅತ್ಯುತ್ತಮ ಜಾಗತಿಕ ಪ್ರದರ್ಶನ ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

“@Arooj_Aftab ರ “ಮೊಹಬ್ಬತ್” 2022 #GRAMMY ಗಳಲ್ಲಿ ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ಪ್ರಶಸ್ತಿ ಪಡೆದುಕೊಂಡಿದೆ. ಗ್ರ್ಯಾಮಿ ಗೆದ್ದ ಮೊದಲ ಪಾಕಿಸ್ತಾನಿ ಮಹಿಳೆ ಅಫ್ತಾಬ್ ಮತ್ತು ಅತ್ಯುತ್ತಮ ಹೊಸ ಕಲಾವಿದರಾಗಿ ನಾಮನಿರ್ದೇಶನಗೊಂಡಿದ್ದಾರೆ” ಎಂದು ಗ್ರ್ಯಾಮಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಬರ್ಕ್ಲೀ ಕಾಲೇಜ್ ಆಫ್ ಮ್ಯೂಸಿಕ್‌ನಲ್ಲಿ ಸಂಗೀತವನ್ನು ಕಲಿಯಲು ಅಫ್ತಾಬ್ 2005ರಲ್ಲಿ ಯುಎಸ್ ಗೆ ತೆರಳಿದರು. ಅವರು ತಮ್ಮ ಮೊದಲ ಆಲ್ಬಂ ‘ಬರ್ಡ್ ಅಂಡರ್ ವಾಟರ್’ ಅನ್ನು 2014 ರಲ್ಲಿ ಬಿಡುಗಡೆ ಮಾಡಿದರು. ವಾಸ್ತವವಾಗಿ, ಅವರ ಹಾಡು `ಮೊಹಬ್ಬತ್’ ಕೂಡ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರ ವಾರ್ಷಿಕ ಬೇಸಿಗೆ ಪ್ಲೇಪಟ್ಟಿಗೆ ದಾರಿ ಮಾಡಿಕೊಟ್ಟಿತು.

ಸುದ್ದಿ ಓದಿ