ಅಂತರರಾಷ್ಟ್ರೀಯ

ವೀಸಾ ಇಲ್ಲದೆ ಭಾರತಕ್ಕೆ ನುಸುಳಿ ಬಂದಿದ್ದ ಚೀನಾ ಪ್ರಜೆಗಳ ಬಂಧನ

ವೀಸಾ ಇಲ್ಲದೆ ಭಾರತಕ್ಕೆ ನುಸುಳಿ ಬಂದಿದ್ದ ಚೀನಾ ಪ್ರಜೆಗಳ ಬಂಧನ

ಸೀತಾಮರ್ಹಿ (ಬಿಹಾರ): ಜೂನ್ 13 :ವೀಸಾ ಇಲ್ಲದೆ ಭಾರತದ ಗಡಿಯೊಳಕ್ಕೆ ನುಸುಳಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸುಮಾರು ಹದಿನೈದು ದಿನಗಳ ಕಾಲ ವಾಸಿಸಿದ್ದ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ. ಇಬ್ಬರು ನೇಪಾಳದತ್ತ ಹೋಗಲು ಪ್ರಯತ್ನಿಸುತ್ತಿದ್ದಾಗ ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಸೀತಾಮರ್ಹಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಕಿಶೋರ್ ರೈ ಅವರ ಪ್ರಕಾರ, ವಿದೇಶಿಗರನ್ನು ಭಾನುವಾರ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಸಿಬ್ಬಂದಿ ಹಿಡಿದಿದ್ದಾರೆ. ಲು ಲ್ಯಾಂಗ್ (28) ಮತ್ತು ಯುವಾನ್ ಹೈಲಾಂಗ್ (34) ಅವರು ಚೀನಾದ ಪಾಸ್‌ಪೋರ್ಟ್‌ಗಳನ್ನಷ್ಟೇ ಹೊಂದಿದ್ದರು, ವೀಸಾ ಹೊಂದಿಲ್ಲದಿದ್ದರೂ ಗಡಿ ಪ್ರವೇಶ ಮಾಡಿದ್ದರೆಂದು ಎಂದು ಅಧಿಕಾರಿ ಹೇಳಿದರು.

ಟ್ಯಾಕ್ಸಿಯಿಂದ ಇಳಿದು ಕಾಲ್ನಡಿಗೆಯಲ್ಲಿ ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ ಬಳಿಕ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಇಬ್ಬರೂ ಬೇರೆ ಪ್ರಯಾಣಿಕರಿಂದ ಲಿಫ್ಟ್ ಪಡೆಯುತ್ತಾ ಭಾರತ ಭೂಪ್ರದೇಶವನ್ನು ಪ್ರವೇಶಿಸಿದ್ದರು. ನೋಯ್ಡಾಗೆ ಹೋಗಿ ಅಲ್ಲಿ ಅವರು ಪರಿಚಯಸ್ಥರ ಮನೆಯಲ್ಲಿ ಇದ್ದರು ಎಂದು ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದಾರೆ.

ಅವರ ಮೊಬೈಲ್ ಫೋನ್ ದಾಖಲೆಗಳು ಮತ್ತು ಇತರ ವಸ್ತುಗಳ ಪರಿಶೀಲನೆ ವೇಳೆ ಚೀನಾದ ಪ್ರಜೆಗಳು ಹಣಕಾಸು ವಂಚನೆ ದಂಧೆಯ ಭಾಗವಾಗಿದ್ದಾರೆ ಎಂದು ಎಸ್‌ಎಸ್‌ಬಿ ಪತ್ತೆ ಹಚ್ಚಿದೆ. ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ.

ಸುದ್ದಿ ಓದಿ