ಅಂತರರಾಷ್ಟ್ರೀಯ

ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಬದರಿ-ಕೇದಾರ್‌ಗೆ ಭೇಟಿ

ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಬದರಿ-ಕೇದಾರ್‌ಗೆ ಭೇಟಿ

ಡೆಹ್ರಾಡೂನ್: ಜೂನ್ 12: ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು ಭಾನುವಾರ ಬೆಳಗ್ಗೆ ಕುಟುಂಬದೊಂದಿಗೆ ಕೇದಾರನಾಥಕ್ಕೆ ಭೇಟಿ ನೀಡಿದರು. ಶ್ರೀಕ್ಷೇತ್ರದಲ್ಲಿ ಅವರು ಕೇದಾರ ದೇವರ ದರ್ಶನ ಪಡೆದರು. ಇದಾದ ಬಳಿಕ ಮಧ್ಯಾಹ್ನ ಬದರಿನಾಥಕ್ಕೂ ಭೇಟಿ ನೀಡಿ ಸೇನಾ ಮುಖ್ಯಸ್ಥರು ದರ್ಶನ ಪಡೆದುಕೊಂಡರು.

ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ವಕ್ತಾರ ಡಾ.ಹರೀಶ್ ಗೌರ್ ಮಾತನಾಡಿ, ಕೇದಾರನಾಥದಲ್ಲಿ ಪಾಂಡೆ ಅವರಿಗೆ ಅರ್ಚಕ ಟಿ.ಗಂಗಾಧರ ಲಿಂಗ, ಪ್ರಸಾದ ನೀಡಿದರು. ಇದಾದ ಬಳಿಕ ಮಧ್ಯಾಹ್ನ ಬದರಿನಾಥ ಭಗವಾನರ ದರ್ಶನ ಪಡೆದರು. ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಯೋಗೇಂದ್ರ ಡಿಮ್ರಿ ಕೂಡ ಅವರ ಜೊತೆ ಉಪಸ್ಥಿತರಿದ್ದರು.ಸೇನಾ ಮುಖ್ಯಸ್ಥರನ್ನು ಬದರಿನಾಥ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಕಿಶೋರ್ ಪನ್ವಾರ್ ಬರಮಾಡಿಕೊಂಡರು.

ಸುದ್ದಿ ಓದಿ