ವಿಶ್ವಸಂಸ್ಥೆ ಬಳಿ ಬಂಧಿತ ಶಸ್ತ್ರಸಜ್ಜಿತ ವ್ಯಕ್ತಿ ವಿರುದ್ದ ಭಯೋತ್ಪಾದಕ ಬೆದರಿಕೆ ಆರೋಪ
ವಿಶ್ವಸಂಸ್ಥೆ, ಡಿ.4 : ವಿಶ್ವಸಂಸ್ಥೆ ಪ್ರಧಾನ ಕಛೇರಿಯ ಹೊರಗೆ ಬಂಧಿತನಾಗಿದ್ದ ಶಸ್ತ್ರಸಜ್ಜಿತ ವ್ಯಕ್ತಿಯ ವಿರುದ್ದ ಕ್ರಿಮಿನಲ್ ಶಸ್ತ್ರಾಸ್ತ್ರ ಹೊಂದಿರುವ, ಭಯೋತ್ಪಾದನೆ ಬೆದರಿಕೆಯ ಆರೋಪಗಳನ್ನು ಹೊರಿಸಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ (ಎನ್ ವೈ ಪಿ ಡಿ) ಡಿಟೆಕ್ಟಿವ್ ಕ್ರಿಸ್ಟೋಫರ್ ರೋಸ್ಕೋಸ್ಕಿ ಶುಕ್ರವಾರ ಹೇಳಿದ್ದಾರೆ.
64 ವರ್ಷ ವಯಸ್ಸಿನ ಬಂಧಿತ ವ್ಯಕ್ತಿ ಬಂದೂಕನ್ನು ವಿಶ್ವಸಂಸ್ಥೆಯ ಸಂಕೀರ್ಣದೊಳಗೆ ತಂದಿದ್ದ ಉದ್ದೇಶ ಮಾತ್ರ ತಿಳಿದುಬಂದಿಲ್ಲ ಎಂದು ರೋಸ್ಕೊಸ್ಕಿ ಹೇಳಿದ್ದಾರೆ.
ಪೊಲೀಸರು ನಡೆಸಿದ ಪ್ರಯತ್ನಗಳ ನಂತರ ವ್ಯಕ್ತಿಯನ್ನು ಗುರುವಾರ ಬಂಧಿಸಲಾಯಿತು. ಫ್ಲೋರಿಡಾದವನಾದ ಆತ ನ್ಯೂಯಾರ್ಕ್ ಬಂದಿದ್ದು, ಆತ ಯಾವುದೇ ಅಪರಾಧ ಇತಿಹಾಸವನ್ನು ಹೊಂದಿಲ್ಲ.
ಪೊಲೀಸರು ತಮ್ಮ ಬಳಿಯಿದ್ದ ವೈದ್ಯಕೀಯ ಮತ್ತಿತರ ದಾಖಲೆಗಳನ್ನು ಹಸ್ತಾಂತರಿಸಿದ ನಂತರ ಬಂದೂಕುಧಾರಿ ತನ್ನ ಕುತ್ತಿಗೆ ಬಳಿ ಇರಿಸಿಕೊಂಡಿದ್ದ ಬಂದೂಕು ಕೆಳಗೆ ಇಳಿಸಲು ಒಪ್ಪಿಕೊಂಡ ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ರೋಸ್ಕೋಸ್ಕಿ ಹೇಳಿದ್ದಾರೆ.