ಅಮೆರಿಕದಲ್ಲಿ 20 ಮಿಲಿಯನ್ ಮಾಸ್ಕ್ ವಿತರಿಸಲಿರುವ ಆ್ಯಪಲ್
ಮಾಸ್ಕೋ, ಏ 6, ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಆ್ಯಪಲ್ ಮೊಬೈಲ್ ಕಂಪನಿ ಅಮೆರಿಕದ 20 ಮಿಲಿಯನ್ ಜನರಿಗೆ ರಕ್ಷಣಾ ಮಾಸ್ಕ್ ಗಳನ್ನು ತನ್ನ ಪೂರೈಕೆಯ ಸರಣಿಯ ಮೂಲಕ ಪೂರೈಸಿದೆ.ಈ ಕುರಿತು ಕಂಪನಿ ಸಿಇಒ ಟಿಮ್ ಕ್ರೂಕ್ ಮಾಹಿತಿ ನೀಡಿದ್ದು, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆ್ಯಪಲ್ ಕೈಜೋಡಿಸಲಿದೆ. ಈಗ ನಾವು ನಮ್ಮ ಪೂರೈಕೆ ಸರಣಿ ಮೂಲಕ ವಿತರಿಸುತ್ತಿದ್ದೇವೆ. ಅದರ ವಿನ್ಯಾಸ, ಇಂಜಿನಿಯರಿಂಗ್, ಕಾರ್ಯಾಚರಣೆ ಮತ್ತು ಪ್ಯಾಕೇಜಿಂಗ್ ತಂಡಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಾರದ ಆರಂಭದಿಂದಲೇ ಮಾಸ್ಕ್ ಗಳ ವಿತರಣೆ ಆರಂಭಗೊಂಡಿದೆ.ಮಾರ್ಚ್ 11 ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಅಮೆರಿಕದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶವಾಗಿದ್ದು, 9600 ಜನರು ಸಾವನ್ನಪ್ಪಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 