ರಸ್ತೆ ಡಾಂಬರಿಕರಣ ಕಾಮಗಾರಿಗೆ ಚಾಲನೆ
ಮೂಡಲಗಿ 12: ತಾಲೂಕಿನ ಮುನ್ಯಾಳ ಗ್ರಾಮದಿಂದ ಖಾನಟ್ಟಿ ಗ್ರಾಮದವರೆಗೆ ರಸ್ತೆ ಡಾಂಬರಿಕರಣ ಕಾಮಗಾರಿಗೆ ಮುಖಂಡರಾದ ಹನಮಂತ ತೇರದಾಳ ಹಾಗೂ ಆನಂದರಾವ ನಾಯ್ಕ ಚಾಲನೆ ನೀಡಿದರು
ನಂತರ ಮುಖಂಡ ಹನಮಂತ ತೇರದಾಳ ಮಾತನಾಡಿ, ಅರಭಾಂವಿ ಶಾಸಕ ಹಾಗೂ ಕೆ ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಆದೇಶದ ಮೇರೆಗೆ ರೂ 40 ಲಕ್ಷ ವೆಚ್ಚದಲ್ಲಿ ಈ ಡಾಂಬರಿಕರಣ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗೋವಿಂದಪ್ಪ ಒಂಟಗೂಡಿ, ಗುತ್ತಿಗೆದಾರ ರುದ್ರಪ್ಪ ಮುತ್ನಾಳ, ಮುನ್ಯಾಳ ಗ್ರಾಮದ ನೂತನ ಗ್ರಾಪಂ ಸದಸ್ಯರು,ಗಣ್ಯರು ಇದ್ದರು.