ಅಂತರರಾಷ್ಟ್ರೀಯ

ಚೀನಾದಿಂದ ಮತ್ತೆ ‘ನೀಚ ನಡೆ’, ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ!

ಚೀನಾದಿಂದ ಮತ್ತೆ ‘ನೀಚ ನಡೆ’, ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ!

ಹೊಸದಿಲ್ಲಿ: ಜನೆವರಿ 18   ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದನ್ನು ಮತ್ತೆ ಚೀನಾ ಮುಂದುವರಿಸಿದೆ. ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಮತ್ತೆ ಉದ್ವಿಗ್ನತೆ ಉಂಟಾಗುವ ಕಾರ್ಯಕ್ಕೆ ಚೀನಾ ಕೈ ಹಾಕಿದೆ. ಚೀನಾ ಪ್ಯಾಂಗಾಂಗ್ ತ್ಸೋ ಸರೋವರದ ದಡದಲ್ಲಿ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ. ಈ ಸೇತುವೆ 400 ಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿದೆ. ಈ ಬ್ರಿಡ್ಜ್ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಮಿಲ್ಟ್ರಿ ನಿಯೋಜನೆಗೆ ಚೀನಾಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಇದು ಪೂರ್ವ ಲಡಾಖ್‌ನ ಸಮೀಪವಿರುವ ಪ್ಯಾಂಗೊಂಗ್ ತ್ಸೋ ಸರೋವರವನ್ನು ಹೊಂದಿರುವ ಈ ಪ್ರದೇಶ, ಭಾರತ ಹಾಗೂ ಚೀನಾದ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿದೆ. ಸೇತುವೆಯು 8 ಮೀಟರ್ ಅಗಲವಿದ್ದು, ಪ್ಯಾಂಗೊಂಗ್‌ನ ಉತ್ತರ ದಂಡೆಯಲ್ಲಿರುವ ಚೀನಾದ ಸೈನ್ಯದ ಮೈದಾನದ ದಕ್ಷಿಣಕ್ಕೆ ಈ ಸೇತುವೆ ನಿರ್ಮಾಣವಾಗುತ್ತಿದೆ. ಜನವರಿ 16ರ ಸ್ಯಾಟಲೈಟ್ ಚಿತ್ರಗಳು ಸೇತುವೆ ನಿರ್ಮಾಣ ಕಾರ್ಯ ಸ್ಥಳದಲ್ಲಿ ಕಾರ್ಮಿಕರು ಹಾಗೂ ಭಾರಿ ಪ್ರಮಾಣದ ಕ್ರೇನ್ ಗಳು ಗೋಚರಿಸಿವೆ. ಕಾಮಗಾರಿಯ ವೇಗ ಇನ್ನೇನು ಕೆಲವೇ ತಿಂಗಳಲ್ಲಿ ಸೇತುವೆ ಸಿದ್ಧಗೊಳ್ಳುವ ಸಾಧ್ಯತೆ ಇದ್ದು, ಭಾರತದ ಕಳವಳಕ್ಕೆ ಕಾರಣವಾಗಿದೆ.

1958ರಲ್ಲಿ ಚೀನಾ ಅತಿಕ್ರಮಣ ಮಾಡಿಕೊಂಡಿರುವ ಭೂ ಪ್ರದೇಶದಲ್ಲಿ ಹೊಸ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆ ನಿರ್ಮಾಣವನ್ನು ಸಂಪೂರ್ಣವಾಗಿ ಕಾನೂನು ಬಾಹಿರವೆಂದು ಭಾರತ ಸ್ಪಷ್ಟವಾಗಿ ಹೇಳಿದೆ. ಫೋರ್ಸ್ ಅನಾಲಿಸಿಸ್‌ನ ಮುಖ್ಯ ಮಿಲಿಟರಿ ವಿಶ್ಲೇಷಕ ಸಿಮ್ ತಕ್ ಪ್ರಕಾರ, “ಚೀನಾ ನಿರ್ಮಾಣ ಮಾಡುತ್ತಿರುವ ಸೇತುವೆಯ ಸ್ಥಳವು ವ್ಯವಹಾರಿಕವಾಗಿ ಭಾರತದ ವಾಸ್ತವಿಕ ಗಡಿ ರೇಖೆಯಾಗಿದೆ. ಈ ಸ್ಥಳವನ್ನು ಸೇನೆಯ ಉದ್ದೇಶಕ್ಕಾಗಿ ಚೀನಾ ಮಾಡುತ್ತಿದೆ. ಏಕೆಂದರೆ ಇದು ಸರೋವರದ ಅತ್ಯಂತ ಕಿರಿದಾದ ಸ್ಥಳವಾಗಿದೆ” ಎಂದು ಹೇಳುತ್ತಾರೆ.

ಸುದ್ದಿ ಓದಿ