ಅಂತರರಾಷ್ಟ್ರೀಯ

ಚಮಚದಿಂದ ಗಿನ್ನೆಸ್ ದಾಖಲೆ ಮಾಡಿದ ಇರಾನ್ ವ್ಯಕ್ತಿ

ಚಮಚದಿಂದ ಗಿನ್ನೆಸ್ ದಾಖಲೆ ಮಾಡಿದ ಇರಾನ್ ವ್ಯಕ್ತಿ

ತೆಹ್ರಾನ್: ಜನೆವರಿ 29   ಇರಾನಿನ ವ್ಯಕ್ತಿಯೊಬ್ಬರು ತಮ್ಮ ದೇಹ, ಕುತ್ತಿಗೆ ಭಾಗದ ಮೇಲೆ ಅತಿಹೆಚ್ಚು ಚಮಚಗಳನ್ನು ಇರಿಸಿಕೊಂಡು ಸಮತೋಲನ ಕಾಯ್ದುಕೊಳ್ಳುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾರೆ.

ಇರಾನ್‌ನ ಎಕ್ರಾಜ್ ನ ಅಬೋಲ್ ಫಜಲ್ ಸಾಬರ್ ಮೊಖ್ತಾರಿ (50) ಗಿನ್ನೆಸ್ ದಾಖಲೆ ಬರೆದ ವ್ಯಕ್ತಿ. ಇವರು ತಮ್ಮ ದೇಹದ ಎದೆ, ಕುತ್ತಿಗೆಯ ಸುತ್ತ ಸುಮಾರು ೮೫ ಚಮಚಗಳನ್ನು ಏಕಕಾಲದಲ್ಲಿ ಇಟ್ಟುಕೊಂಡು ಒಂದು ಚಮಚವೂ ಬೀಳದಂತೆ ಸಮತೋಲನ ಕಾಯ್ದುಕೊಂಡು ಈ ಸಾಧನೆ ಮಾಡಿದ್ದಾರೆ. ಈ ಸಂಬಂಧದ ವಿಡಿಯೋ guinnessworldrecords ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಆಗಿದೆ.

ಮೊಖ್ತಾರಿ ಅವರು ಬಾಲ್ಯದಿಂದಲೂ ತಮ್ಮ ದೇಹದ ಮೇಲೆ ಚಮಚಗಳನ್ನು ಜೋಡಿಸಿಕೊಳ್ಳುವ ಸಮತೋಲನ ಕಾಪಾಡಿಕೊಳ್ಳುವ ಅಭ್ಯಾಸವನ್ನು ಮಾಡುತ್ತಿದ್ದರು. ನಿರಂತರ ಅಭ್ಯಾಸದಿಂದ ಇದೀಗ ೫೦ನೇ ವಯಸ್ಸಿನಲ್ಲಿ ಗಿನ್ನೆಸ್ ವಿಶ್ವ ದಾಖಲೆಗೆ ಸೇರಲು ಸಾಧ್ಯವಾಯಿತು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಮೊಖ್ತಾರಿ, “ನಾನು ಚಿಕ್ಕವನ್ನಿದ್ದಾಗ ಆಕಸ್ಮಿಕವಾಗಿ ನನ್ನಲ್ಲಿನ ಈ ಪ್ರತಿಭೆ ನನಗೆ ಪರಿಚಯವಾಯಿತು. ಆದರೆ ಅನೇಕ ವರ್ಷಗಳ ಅಭ್ಯಾಸ ಮತ್ತು ಪ್ರಯತ್ನದ ನಂತರ ನನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಯಿತು. ಕೇವಲ ಚಮಚ ಮಾತ್ರವಲ್ಲ ಪ್ಲಾಸ್ಟಿಕ್, ಗಾಜು, ಹಣ್ಣು, ಕಲ್ಲು, ಮರದಂತಹ ವಸ್ತುಗಳನ್ನು ಅಂಟಿಸಿಕೊಂಡು ಸಮತೋಲನ ಮಾಡಬಲ್ಲೆ ಎಂದು ಹೇಳಿದರು.

ಸುದ್ದಿ ಓದಿ