ಅಂತರರಾಷ್ಟ್ರೀಯ

ಅಮೆರಿಕನ್ನರು ಸಾರ್ವಜನಿಕವಾಗಿ ಬಂದೂಕು ಕೊಂಡೊಯ್ಯಬಹುದು: ಯುಎಸ್ ಸುಪ್ರೀಂ ಕೋರ್ಟ್

ಅಮೆರಿಕನ್ನರು ಸಾರ್ವಜನಿಕವಾಗಿ ಬಂದೂಕು ಕೊಂಡೊಯ್ಯಬಹುದು: ಯುಎಸ್ ಸುಪ್ರೀಂ ಕೋರ್ಟ್

ನ್ಯೂಯಾರ್ಕ್: ಜೂನ್ ೨೪ : ಇನ್ನು ಮುಂದೆ ಅಮೆರಿಕನ್ನರು ಸಾರ್ವಜನಿಕವಾಗು ಬಂದೂಕು ಬಳಕೆ ಮಾಡಬಹುದು, ಸಾರ್ವಜನಿಕವಾಗಿ ಕೈಬಂದೂಕು ಕೊಂಡೊಯ್ಯುವ ಮೂಲಭೂತ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಹಿಂಸಾಚಾರ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆ ಈ ತೀರ್ಪು ನೀಡಲಾಗಿದ್ದು, ಇದು ದೇಶಾದ್ಯಂತ ರಾಜ್ಯಗಳು ಮತ್ತು ನಗರಗಳಿಗೆ ದೂರಗಾಮಿ ಪರಿಣಾಮಗಳನ್ನು ಬೀರುವ ಮಹತ್ವದ ನಿರ್ಧಾರವಾಗಿದೆ.

ಸುಪ್ರೀಂ ಕೋರ್ಟ್‌ ನ 6-3 ನಿರ್ಧಾರವು ಶತಮಾನಕ್ಕಿಂತಲೂ ಹಳೆಯದಾದ ನ್ಯೂಯಾರ್ಕ್ ಕಾನೂನನ್ನು ತೊಡೆದುಹಾಕುತ್ತದೆ. ಆದರೆ ಯಾವುದೇ ವ್ಯಕ್ತಿಯು ಮನೆಯ ಹೊರಗೆ ಕೈಬಂದೂಕವನ್ನು ಸಾಗಿಸಲು ಅನುಮತಿಯನ್ನು ಪಡೆಯಲು ಕಾನೂನುಬದ್ಧ ಸ್ವರಕ್ಷಣೆ ಅಗತ್ಯವನ್ನು ಅಥವಾ ಸರಿಯಾದ ಕಾರಣವನ್ನು ಸಾಬೀತುಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಕ್ಯಾಲಿಫೋರ್ನಿಯಾ ಸೇರಿದಂತೆ ಹಲವಾರು ಇತರ ರಾಜ್ಯಗಳು ಇದೇ ರೀತಿಯ ಕಾನೂನಿವೆ. ಡೆಮಾಕ್ರಟಿಕ್ ಅಧ್ಯಕ್ಷ ಜೋ ಬಿಡೆನ್ ಈ ನಿರ್ಧಾರವನ್ನು ಖಂಡಿಸಿದ್ದು, ಇದು ಸಾಮಾನ್ಯ ಜ್ಞಾನ ಮತ್ತು ಸಂವಿಧಾನ ಎರಡಕ್ಕೂ ವಿರುದ್ಧವಾಗಿದೆ ಮತ್ತು ನಮ್ಮೆಲ್ಲರನ್ನು ತೊಂದರೆಗೊಳಪಡಿಸಲಿದೆ ಎಂದು ಹೇಳಿದರು.

ಸುದ್ದಿ ಓದಿ