ಮಾನವನಿಗೆ ಹಂದಿ ಹೃದಯ ಕಸಿ ಮಾಡಿದ ಅಮೆರಿಕ ವೈದ್ಯರು: ಪ್ರಪಂಚದಲ್ಲೇ ಮೊದಲು
ನ್ಯೂಯಾರ್ಕ್: ಜನೆವರಿ 11 57 ವರ್ಷದ ವ್ಯಕ್ತಿಗೆ ಹಂದಿಯ ಹೃದಯವನ್ನು ಕಸಿ ಮಾಡುವಲ್ಲಿ ಅಮೆರಿಕ ವೈದ್ಯರು ಯಶಸ್ಸು ಸಾಧಿಸಿದ್ದಾರೆ, ವೈದ್ಯಕೀಯ ಲೋಕದಲ್ಲೇ ಇದು ಮೊದಲನೆ ಪ್ರಯೋಗವಾಗಿದ್ದು, ಇತಿಹಾಸ ನಿರ್ಮಿಸಿದೆ.
ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯವು, ಪ್ರಾಣಿಗಳ ಅಂಗಾಂಗಗಳನ್ನು ಕಸಿ ಮಾಡುವುದು ವೈದ್ಯಕಿಯ ಲೋಕದ ದೊಡ್ಡ ಮೈಲಿಗಲ್ಲು. ಇದು ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಡೇವಿಡ್ ಬೆನೆಟ್ ಎಂಬುವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿದ್ದು, ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದ ಪರಿಣಾಮ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಇವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಸಿಯಿಂದ ಅವರ ದೇಹದಲ್ಲಿ ಯಾವ ರೀತಿಯ ಮಾರ್ಪಡುಗಳಾಗುತ್ತಿವೆ ಎಂದು ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದರು.
ಸಾಯಬೇಕು ಇಲ್ಲವೇ ಕಸಿ ಮಾಡಿಸಿಕೊಳ್ಳಬೆಕು. ನನಗೆ ಸಾಯುವುದು ಇಷ್ಟವಿರಲಿಲ್ಲ. ಇದು ಕತ್ತಲೆಯಲ್ಲಿ ಗುಂಡು ಹಾರಿಸುವಂತಹ ಪ್ರಯತ್ನ. ಆದರೆ ಇದು ನನ್ನ ಕೊನೆಯ ಆಯ್ಕೆಯಾಗಿತ್ತು ಎಂದು ಶಸ್ತ್ರ ಸಚಿಕಿತ್ಸೆಗೆ ಒಳಗಾಗುವ ಮುನ್ನ ಕಸಿಗೆ ಒಳಗಾದ ಡೇವಿಡ್ ಬೆನೆಟ್ ಹೇಳಿದ್ದರು.
ಬೆನೆಟ್ ಅವರಿಗೆ ಹೃದಯ-ಶ್ವಾಸಕೋಶದ ಬೈಪಾಸ್ ಯಂತ್ರ ಅಳವಡಿಸಲಾಗಿತ್ತು. ಆದ ಕಾರಣ ಕಳೆದ ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದರು. ಇದೀಗ ಈ ಕಸಿಯಿಂದ ಬೆನೆಟ್, ನಾನು ಚೇತರಿಸಿಕೊಂಡು ಓಡಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
“ಇದು ಅದ್ಭುತ ಶಸ್ತ್ರಚಿಕಿತ್ಸೆಯಾಗಿದೆ ಮತ್ತು ಅಂಗಗಳ ಕೊರತೆಯನ್ನು ನೀಗಿಸಲು ಇದೊಂದು ಒಂದು ದಿಟ್ಟ ಹೆಜ್ಜೆಯಾಗಿದೆ. ನಾವು ಎಚ್ಚರಿಕೆಯಿಂದ ಮುಂದುವರಯುತ್ತಿದ್ದೇವೆ. ಆದರೆ ಇದು ಮುಂದಿನ ದಿನಗಳಲ್ಲಿ ಪ್ರಪಂಚದ ಮೊದಲ ಈ ಶಸ್ತ್ರಚಿಕಿತ್ಸೆಯು ರೋಗಿಗಳಿಗೆ ಆಯ್ಕೆಯನ್ನು ನೀಡಲಿದೆ ಎಂಬ ಆಶಾವಾದ ನಮ್ಮಲ್ಲಿದೆ ಎಂದು ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ಕಸಿ ಮಾಡಿದ ಬಾಟ್ರ್ಲಿ ಗ್ರಿಫಿತ್ ಹೇಳಿದರು.