ಅಮೆರಿಕದಲ್ಲಿ ನುಗ್ಗಿದ ಕಾರು; ಹಲವರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ವಿಸ್ಕಾನ್ಸಿನ್, ನ 22 ಅಮೆರಿಕದಲ್ಲಿ ದುರಂತವೊಂದು ನಡೆದಿದೆ. ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದಂಥ ಘಟನೆ ವೌಕೇಶಾ ನಗರದಲ್ಲಿ ನಡೆದಿದೆ. ಕ್ರಿಸ್ಮಸ್ ಮೆರವಣಿಗೆ ಹೊರಟಿದ್ದ ಜನ್ರ ಮೇಲೆ ವ್ಯಕ್ತಿಯೊಬ್ಬ ಎಸ್‌ಯುವಿ ಕಾರೊಂದನ್ನು ನುಗ್ಗಿಸಿಕೊಂಡು ಹೋಗಿದ್ದಾನೆ. ಕ್ಷಣಮಾತ್ರದಲ್ಲಿ ನಡೆದ ಈ ಘಟನೆಯಲ್ಲಿ ಹಲವರು ಸಾವಿಗೀಡಾಗಿರುವ ಶಂಕೆ ಇದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಕಳೆದ ವರ್ಷ ಕರೊನಾ ಹಾವಳಿಯಿಂದಾಗಿ ಕ್ರಿಸ್ಮಸ್ ಮೆರವಣಿಗೆಯನ್ನು ನಡೆಸಿರಲಿಲ್ಲ. ಆದರೆ, ಈ ಬಾರಿಯ 58ನೇ ಕ್ರಿಸಮಸ್ ಮೆರವಣಿಗೆಯಲ್ಲಿ ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ್ರು ನಿನ್ನೆ ಭಾಗಿಯಾಗಿದ್ದರು.
ಇನ್ನು ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಎಸ್ ಯು ವಿ ಕಾರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಅಂತಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ, ಘಟನೆ ಬಳಿಕ ಕಾರಿನ ಡ್ರೈವರ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಅಂತಾ ವೌಕೇಶ್ ನಗರದ ಪೊಲೀಸ್ ಅಧಿಕಾರಿ ಡೇನಿಯಲ್ ಥಾಂಪ್ಟನ್ ತಿಳಿಸಿದ್ದಾರೆ. ಆದ್ರೆ, ಅಪಘಾತಕ್ಕೆ ಕಾರಣನಾದ ಚಾಲಕ ಏಕೆ ಈ ರೀತಿ ಕಾರು ಚಲಾಯಿಸಿದ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.