ತೈವಾನ್ ಬೆಂಬಲಿಸಲು ಅಮೆರಿಕಾ ಸಿದ್ಧ ; ಪೆಂಟಗನ್ ಮುಖ್ಯಸ್ಥ
ವಾಷಿಂಗ್ಟನ್, ಡಿ 5: ಚೀನಾ ತನ್ನ ಪರಮಾಣು ಸಾಮರ್ಥ್ಯಗಳನ್ನು ಅತ್ಯಂತ ತ್ವರಿತವಾಗಿ ಬಲಪಡಿಸಿಕೊಳ್ಳುತ್ತಿದೆ. ಆದರೆ, ವಾಷಿಂಗ್ಟನ್ ಸ್ಪರ್ಧೆಗೆ ಸಿದ್ಧವಾಗಿದೆ. ತೈವಾನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಬೆಂಬಲಿಸಲು ಸಹ ಕಾರ್ಯನಿರ್ವಹಿಸಲಿದೆ ಎಂದು ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
ರೇಗನ್ ನ್ಯಾಷನಲ್ ಡಿಫೆನ್ಸ್ ಫೋರಂನಲ್ಲಿ ಶನಿವಾರ ಮಾತನಾಡಿದ ಆಸ್ಟಿನ್, "ಒಂದು-ಚೀನಾ" ನೀತಿಗೆ ಅಮೆರಿಕಾ ಬದ್ಧವಾಗಿದೆ, ಆದರೆ ತೈವಾನ್ ದ್ವೀಪದ ವಿರುದ್ಧ ಸೇನಾ ಶಕ್ತಿ ಬಳಸುವ ಯಾವುದೇ ಪ್ರಯತ್ನಗಳನ್ನು ಪ್ರತಿರೋಧಿಸಲು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಪ್ರಕಾರ, ಚೀನಾದ ಸೇನಾ ಚಟುವಟಿಕೆಯ ಹೆಚ್ಚಳವನ್ನು ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪದೊಂದಿಗೆ ಎದುರಿಸಲು ಅಮೆರಿಕಾ ಸಿದ್ಧವಾಗಿದೆ. "ತೈವಾನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಬೆಂಬಲಿಸಲು" ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ನಿರ್ಮಿಸುತ್ತಿದೆ, 2030 ರ ವೇಳೆಗೆ ಕನಿಷ್ಠ 1,000 ಅಣ್ವಸ್ತ್ರ ಸಿಡಿತಲೆಗಳ ಅಭಿವೃದ್ದಿಯ ಗುರಿಯನ್ನು ಹೊಂದಿದೆ ಎಂದು ಆಸ್ಟಿನ್ ತಿಳಿಸಿದ್ದಾರೆ.