ಅಂತರರಾಷ್ಟ್ರೀಯ

ರಷ್ಯಾ ವಿರುದ್ಧ ಮಾತ್ನಾಡುವಂತೆ ಬಲವಂತ ಮಾಡುತ್ತಿರುವ ಅಮೆರಿಕ

ರಷ್ಯಾ ವಿರುದ್ಧ ಮಾತ್ನಾಡುವಂತೆ ಬಲವಂತ ಮಾಡುತ್ತಿರುವ ಅಮೆರಿಕ

ವಾಷಿಂಗ್ಟನ್: ಮಾರ್ಚ್ 18: ರಷ್ಯಾದ ವಿರುದ್ಧ ಮಾತನಾಡುವಂತೆ ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಅಮೆರಿಕ ಕಾಂಗ್ರೆಸ್ನ ಸದಸ್ಯರಾದ ಜೋ ವಿಲ್ಸನ್ ಹಾಗೂ ಭಾರತೀಯ-ಅಮೆರಿಕನ್ ರೋ ಖನ್ನಾ ನೇತೃತ್ವದ ತಂಡ ಪುಟಿನ್ ವಿರುದ್ಧ ಮಾತನಾಡುವಂತೆ ಒತ್ತಾಯಿಸುತ್ತಿದೆ.

ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಗೆ ದೂರವಾಣಿ ಕರೆ ಮಾಡಿ ಈ ಇಬ್ಬರು ನಾಯಕರು ಉಕ್ರೇನ್ ಮೇಲಿನ ದಾಳಿಯ ಕುರಿತು ಚರ್ಚೆ ನಡೆಸಿದರು. ಉಕ್ರೇನ್ ನಲ್ಲಿರುವ ನಾಗರಿಕರನ್ನು ಗುರಿಯಾಗಿರಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಭಾರತ ಧ್ವನಿ ಎತ್ತಬೇಕೆಂದು ಇಬ್ಬರೂ ಸದಸ್ಯರು ಭಾರತದ ರಾಯಭಾರಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜೋ ವಿಲ್ಸನ್ “ನನ್ನ ಸಹೋದ್ಯೋಗಿ ರೋ ಖನ್ನಾ ಜೊತೆಗೂಡಿ ಭಾರತದ ರಾಯಭಾರಿಯೊಂದಿಗೆ ಚರ್ಚಿಸಿದ್ದೇನೆ. ಉಕ್ರೇನ್‌ನಲ್ಲಿ ಪುಟಿನ್ ನಡೆಸಿದ ದೌರ್ಜನ್ಯವನ್ನು ವಿಶ್ವ ನಾಯಕರು ಖಂಡಿಸುವುದು ಮುಖ್ಯವಾಗಿದೆ” ಎಂದು ತಿಳಿಸಿದ್ದಾರೆ.

ಉಕ್ರೇನ್ ವಿರುದ್ಧದ ಮಿಲಿಟರಿ ದಾಳಿಗಾಗಿ ರಷ್ಯಾವನ್ನು ಖಂಡಿಸುವಂತೆ ಅಮೆರಿಕ ಪದೇ ಪದೇ ಆಗ್ರಹಿಸುತ್ತಿದೆ. ಅಮೆರಿಕ ಕಾಂಗ್ರೆಸ್ನ ಸದಸ್ಯರು ಕಳೆದು ಎರಡು ದಿನಗಳಲ್ಲಿ 2 ಬಾರಿ ಭಾರತವನ್ನು ಒತ್ತಾಯ ಮಾಡಿದ್ದಾರೆ. ಒಂದು ದಿನ ಮುಂಚಿತವಾಗಿ ಟೆಡ್ ಡಬ್ಲ್ಯೂ ಲಿಯು ಮತ್ತು ಟಾಮ್ ಮಾಲಿನೋವ್ಸ್ಕಿ ರಷ್ಯಾವನ್ನು ಖಂಡಿಸುವಂತೆ ಭಾರತವನ್ನು ಒತ್ತಾಯ ಮಾಡಿದ್ದರು.

“ನಾವು ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ಅರ್ಥಮಾಡಿಕೊಂಡಿದ್ರೂ ಮಾರ್ಚ್ 2ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮತದಾನದಿಂದ ದೂರವಿರಲು ನಿಮ್ಮ ಸರ್ಕಾರದ ನಿರ್ಧಾರದಿಂದ ನಾವು ನಿರಾಶೆಗೊಂಡಿದ್ದೇವೆ” ಎಂದು ಅವರು ಸಂಧುಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ