ರಷ್ಯಾಕ್ಕೆ ಹೋಗದಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ
ವಾಷಿಂಗ್ಟನ್ ಜನವರಿ 24 ಉಕ್ರೇನ್‌ನೊಂದಿಗಿನ ರಷ್ಯಾದ ಗಡಿಯಲ್ಲಿ ಉದ್ವಿಗ್ನತೆಯ ನಡುವೆ ರಷ್ಯಾಕ್ಕೆ ಪ್ರಯಾಣಿಸದಂತೆ ಯುನೈಟೆಡ್ ಸ್ಟೇಟ್ಸ್ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಈ ನಿಟ್ಟಿನಲ್ಲಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್
ಪರಾಮರ್ಶೆ ಮಾಡಿ ತನ್ನ ಸಲಹೆ ನೀಡಿದೆ. ವಿದೇಶಾಂಗ ಸಚಿವಾಲಯವು ತನ್ನ ಸಲಹೆಯಲ್ಲಿ,
“ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆಯೆಂದು ಕೂಡಿದ್ದು, ಯುಎಸ್ ನಾಗರಿಕರಿಗೆ ಕಿರುಕುಳ
ನೀಡುವ ಸಾಧ್ಯತೆ ಇದೆ. ರಷ್ಯಾದಲ್ಲಿ ಯುಎಸ್ ನಾಗರಿಕರಿಗೆ ಸಹಾಯ ಮಾಡುವ ರಾಯಭಾರ ಕಚೇರಿಯ
ಸೀಮಿತ ಕಾರ್ಯ, ಕೋವಿಡ್ ನಿಬಂಧನೆಗಳು, ಭಯೋತ್ಪಾದನೆ, ರಷ್ಯಾ ಭದ್ರತಾ ಅಧಿಕಾರಿಗಳ
ಕಿರುಕುಳ ಮತ್ತು ಸ್ಥಳೀಯ ಕಾನೂನಿನ ಅನಿಯಂತ್ರಿತ ಜಾರಿಯಿಂದಾಗಿ ಅಮೆರಿಕ ನಾಗರಿಕರು
ರಷ್ಯಾಕ್ಕೆ ಪ್ರಯಾಣ ಮಾಡದಂತೆ ಸಲಹೆ ನೀಡಿದೆ.”
ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಯುಎಸ್
ಸ್ಟೇಟ್ ಡಿಪಾರ್ಟ್ಮೆಂಟ್ ಎಚ್ಚರಿಕೆ ಸಂದೇಶ ನೀಡಿದೆ. “ಉದ್ವಿಗ್ನ ಪರಿಸ್ಥಿತಿಯ
ದೃಷ್ಟಿಯಿಂದ ಅಮೆರಿಕನ್ನರು ರಷ್ಯಾದಿಂದ ಉಕ್ರೇನ್‌ಗೆ ಈ ಪ್ರದೇಶದ ಮೂಲಕ ಪ್ರಯಾಣಿಸದಂತೆ
ಸೂಚಿಸಲಾಗಿದೆ” ಎಂದು ಅಮೆರಿಕ ಸಚಿವಾಲಯ ತಿಳಿಸಿದೆ.