ಅಂತರರಾಷ್ಟ್ರೀಯ

ಅಮೆರಿಕ: ನಿತ್ಯ ಲಕ್ಷ ದಾಟುತ್ತಿರುವ ಕೊರೋನ ಸೋಂಕು ಪ್ರಕರಣಗಳು

ಅಮೆರಿಕ: ನಿತ್ಯ  ಲಕ್ಷ  ದಾಟುತ್ತಿರುವ ಕೊರೋನ ಸೋಂಕು ಪ್ರಕರಣಗಳು

ವಾಷಿಂಗ್ಟನ್ , ನವೆಂಬರ್ 24: ಅಮೆರಿಕದಲ್ಲಿ ಕೊರೊನಾ ಸೋಂಕು  ಹೆಚ್ಚಾಗುತ್ತಿದ್ದು  ಪ್ರತಿನಿತ್ಯ  ಲಕ್ಷದ ಗಡಿ ದಾಟಿ ಹೊಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೋಂಕು  ಪ್ರಕರಣಗಳು ಅಮೆರಿಕಾದಲ್ಲೇ  ವರದಿಯಾಗಿವೆ.

ಒಂದೇ ದಿನದಲ್ಲಿ 1,58,211ಕ್ಕೂ ಹೆಚ್ಚು ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಕೊವಿಡ್-19 ಸೋಂಕಿತರ ಸಂಖ್ಯೆ 1,ಕೋಟಿ 27ಲಕ್ಷ  ಗಡಿ ದಾಟಿ ಹೋಗಿದೆ.

 

ಇಡೀ ವಿಶ್ವದ ಪೈಕಿ ಅಮೆರಿಕಾದಲ್ಲಿಯೇ ಅತಿಹೆಚ್ಚು ಜನರು ಕೊರೊನಾ  ಸೋಂಕಿನಿಂದ ಮೃತಪಟ್ಟಿದ್ದಾರೆ ಕಳೆದ 24 ಗಂಟೆಗಳಲ್ಲಿ  ಮಹಾಮಾರಿಗೆ 912ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯು 2,ಲಕ್ಷದ 63,ಸಾವಿರದ 629ಕ್ಕೆ ಏರಿಕೆಯಾಗಿದೆ.ಈ ನಡುವೆ ಗುಣಮುಖರ ಸಂಖ್ಯೆಯೂ ಹೆಚ್ಚಳವಾಗಿದೆ. ದೇಶದಲ್ಲಿ ಈವರೆಗೂ 75,ಲಕ್ಷ 40ಸಾವಿರದ ,946 ಸೋಂಕಿತರು ಗುಣಮುಖರಾಗಿದ್ದಾರೆ ಎಂದು  ಅಮೆರಿಕಾದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲದ ಹೊಸ ಅಂಕಿ ಅಂಶಗಳು ಹೇಳಿವೆ . 

ಸುದ್ದಿ ಓದಿ