ಅಂತರರಾಷ್ಟ್ರೀಯ

ಅಮೆರಿಕಾ; ಬಾಲಕನಿಂದ ಗುಂಡಿನ ದಾಳಿ ಮೂವರು ಸಾವು.. 8 ಮಂದಿಗೆ ಗಾಯ

ಅಮೆರಿಕಾ;  ಬಾಲಕನಿಂದ  ಗುಂಡಿನ  ದಾಳಿ  ಮೂವರು ಸಾವು.. 8 ಮಂದಿಗೆ ಗಾಯ

ವಾಷಿಂಗ್ಟನ್‌, ಡಿ 1  -  ಬಾಲಕನೊಬ್ಬ      ಶಾಲೆಯಲ್ಲಿ   ಗುಂಡಿನ ದಾಳಿ ನಡೆಸಿದ ಕಾರಣ  ಮೂವರು ವಿದ್ಯಾರ್ಥಿಗಳು  ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮಿಚಿಗನ್      ಡೆಟ್ರಾಯಿಟ್‌  ಬಳಿಯ   ಹೈಸ್ಕೂಲ್‌ನಲ್ಲಿ   ಮಂಗಳವಾರ   ನಡೆದಿದೆ.
15 ವರ್ಷದ ಬಾಲಕ ಹೈಸ್ಕೂಲ್‌ನಲ್ಲಿ  ಗುಂಡಿನ ದಾಳಿ ನಡೆಸಿದ್ದಾನೆ.   ಪರಿಣಾಮ, ಶಿಕ್ಷಕ ಸೇರಿದಂತೆ 8  ಜನರು ಗಾಯಗೊಂಡಿದ್ದು, ಮೂವರು  ವಿದ್ಯಾರ್ಥಿಗಳು ಅಸುನೀಗಿದ್ದಾರೆ  ಎಂದು   ಓಕ್ಲ್ಯಾಂಡ್ ಕೌಂಟಿ ಅಂಡರ್‌ಶೆರಿಫ್  ಮೈಕೆಲ್ ಮೆಕ್‌ಕೇಬ್ ಹೇಳಿದ್ದಾರೆ.  
ಮಧ್ಯಾಹ್ನ ಆಕ್ಸ್‌ಫರ್ಡ್   ಹೈಸ್ಕೂಲ್‌ನಲ್ ಲಿ ತರಗತಿಗಳು ನಡೆಯುತ್ತಿರುವಾಗ  ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ  16 ವರ್ಷದ ಬಾಲಕ, 14  ಹಾಗೂ  17 ವರ್ಷದ ಬಾಲಕಿಯರು  ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ  8    ಮಂದಿಯ  ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.
ಶಂಕಿತನನ್ನು     ಪ್ರತಿರೋಧವಿಲ್ಲದೆ ಕಸ್ಟಡಿಗೆ   ತೆಗೆದುಕೊಳ್ಳಲಾಗಿದೆ.  ಗುಂಡಿನ   ದಾಳಿಯ  ಹಿಂದಿನ    ಉದ್ದೇಶ  ಇನ್ನೂ   ತಿಳಿದು ಬಂದಿಲ್ಲ   ಎಂದು ಮೆಕ್‌ಕೇಬ್  ತಿಳಿಸಿದ್ದಾರೆ.

ಈ ಭಯಾನಕ  ಘಟನೆಯ ನಂತರ ಶಾಲೆಗೆ ಬೀಗ  ಹಾಕಲಾಗಿದೆ. ಅಧಿಕಾರಿಗಳು ಗುಂಡಿನ ದಾಳಿ ನಡೆದ ಬಾಲಕನಿಗಾಗಿ ಶೋಧ ಪ್ರಾರಂಭಿಸಿದಾಗ, ಉಳಿದ ವಿದ್ಯಾರ್ಥಿಗಳನ್ನು  ಕೊಠಡಿ ಒಳಗೆ  ಕೂಡಿ   ಬೀಗ ಹಾಕಿ ರಕ್ಷಿಸಿದ್ದರು.

ಸುದ್ದಿ ಓದಿ