ಅಮೆರಿಕ; ವಾಗ್ದಂಡನೆ ಹಿಂದೆ ಬಿದ್ದ ಸಂಸದರಿಂದ ಅಭಿವೃದ್ಧಿ ಕುಂಠಿತ; ರಿಪಬ್ಲಿಕನ್
ವಾಷಿಂಗ್ಟನ್, ನ 14 : ಅಮೆರಿಕದ ಸಂಸತ್ ಸದಸ್ಯರು ತಮ್ಮ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವಾಗ್ದಂಡನೆಯ ಪಟ್ಟಿ ಹಿಡಿದಿರುವುದರಿಂದ ಸರ್ಕಾರದ ದಿನನಿತ್ಯ ವ್ಯವಹಾರಗಳು ಸ್ಥಗಿತಗೊಂಡಿದೆ ಎಂದು ರಿಪಬ್ಲಿಕನ್ ಸಂಸತ್ ನಾಯಕ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸತ್ ನಾಯಕ ಮಿಚ್ ಮ್ಯಾಕ್ ಕರ್ನಲ್ , ಸರ್ಕಾರದ ಎಲ್ಲಾ ಅಗತ್ಯ ವ್ಯವಹಾರಗಳನ್ನು ನಿರ್ಲಕ್ಷಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ವಿನಿಯೋಗಗಳ ಕಾಯ್ದೆ (ಎನ್ ಡಿಎಎ), ಬಜೆಟ್, ಮೆಕ್ಸಿಕೋ ಮತ್ತು ಕೆನಡಾದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ( ಯುಎಸ್ ಎಂಸಿಎ) ಗಳ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದರು.
ಸಂಸತ್ತಿನಲ್ಲಿ ಪ್ರಮುಖ ವ್ಯವಹಾರಗಳು ಮತ್ತು ರಕ್ಷಣಾ ಇಲಾಖೆಗೆ ಅಗತ್ಯ ಹಣ ಒದಗಿಸಲು ಮತ್ತು ಅನುಮತಿ ನೀಡಲು ಸಾಕಷ್ಟು ಸದಸ್ಯರು ಮತ್ತು ಸಂಪನ್ಮೂಲಗಳಿವೆ. ಅಧ್ಯಕ್ಷರ ವಿರುದ್ಧ ವಾಗ್ದಂಡನೆಯ ಪ್ರಸ್ತಾಪ ಇನ್ನೂ ಸಂಸತ್ತಿನ ವೈಯಕ್ತಿಕ ಸಮಿತಿಗಳ ಪರಿಶೀಲನೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಸದರು ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿರುವುದೇಕೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದು ಮ್ಯಾಕ್ ಕರ್ನಲ್ ಹೇಳಿದ್ದಾರೆ.
ಸಂಸದ ರಾಯ್ ಬ್ಲಂಟ್ ಪ್ರಕಾರ, ಡೆಮಾಕ್ರೆಟ್ ಪಕ್ಷದ ಆಡಳಿತವಿರುವ ಸಂಸತ್ತು ಕಾಯ್ದೆಯನ್ನು ಅಂಗೀಕರಿಸಲು ನಿರಾಕರಿಸಿದ್ದರಿಂದ 1960ರಿಂದ ಪ್ರತಿ ವರ್ಷ ಅಮೆರಿಕದ ಸೇನಾ ಪಡೆಗೆ ಬಿಡುಗಡೆ ಮಾಡುತ್ತಿದ್ದ ಹಣವನ್ನು ಮಂಜೂರು ಮಾಡಲಾಗಿಲ್ಲ.