ಅಂತರರಾಷ್ಟ್ರೀಯ

ಅಮೆರಿಕಾ; ೨೪ ಗಂಟೆಗಳಲ್ಲಿ ೧,೧೬೯ ಮಂದಿ ಸಾವು

ಅಮೆರಿಕಾ;  ೨೪ ಗಂಟೆಗಳಲ್ಲಿ ೧,೧೬೯ ಮಂದಿ ಸಾವು

ವಾಷಿಂಗ್ಟನ್, ಏ ೩,ಅಮೆರಿಕಾದಲ್ಲಿ  ಕೊರೊನಾ  ವೈರಸ್  ಮರಣ ಮೃದಂಗ ಬಾರಿಸುತ್ತಿದೆ.  ಮಹಾಮಾರಿ ವೈರಸ್ ನಿಂದಾಗಿ     ಕೇವಲ ೨೪ ಗಂಟೆಗಳಲ್ಲಿ ೧,೧೬೯  ಮಂದಿ  ಮೃತಪಟ್ಟಿದ್ದಾರೆ.  ವಿಶ್ವದ ಯಾವುದೇ ದೇಶದಲ್ಲಿ ಕೊರೊನಾ ಕಾರಣದಿಂದ  ಒಂದು ದಿನದಲ್ಲಿ ಇಷ್ಟು ಪ್ರಮಾಣದ ಸಾವುಗಳು  ಸಂಭವಿಸಿಲ್ಲ.  ಈ ಸಂಬಂಧ ಜಾನ್ಸ್ ಹಾಪ್ಕಿನ್ಸ್   ವಿಶ್ವವಿದ್ಯಾಲಯ ಈ ಮಾಹಿತಿ ನೀಡಿದೆ.
ಅಮೆರಿಕಾ ಕಾಲಮಾನ  ಬುಧವಾರ ರಾತ್ರಿ  ೮;೩೦ಗಂಟೆಯಿಂದ ಗುರುವಾರ ರಾತ್ರಿ ೮;೩೦ರ ನಡುವೆ ಈ ಸಾವುಗಳು ಸಂಭವಿಸಿವೆ ಎಂದು ತಿಳಿಸಿದೆ. ಇದರೊಂದಿಗೆ ಒಂದು ದಿನದಲ್ಲಿ ಅತ್ಯಧಿಕ ಕೊರೊನಾ ಸಾವು ಸಂಭವಿಸಿದ ದೇಶಗಳ ಪೈಕಿ ಈವರೆಗೆ ಇಟಲಿ(೯೬೯) ಮೊದಲ ಸ್ಥಾನದಲ್ಲಿತ್ತು.. ಪ್ರಸ್ತುತ ಆ ಸ್ಥಾನವನ್ನು  ಅಮೆರಿಕಾ(೧೧೬೯) ಪಡೆದುಕೊಂಡಿದೆ.ಕೊರೊನಾ ಮಹಾಮಾರಿ ಸೋಂಕು ಆರಂಭದಿಂದ  ಈವರೆಗೆ ಅಮೆರಿಕಾದಲ್ಲಿ ಒಟ್ಟು ೬, ೦೯೫ ಮಂದಿ  ಸಾವನ್ನಪ್ಪಿದ್ದಾರೆ ಎಂದು   ಅಧಿಕೃತ ಮೂಲಗಳು ತಿಳಿಸಿವೆ.  ಅಷ್ಟು ಮಾತ್ರವಲ್ಲದೆ, ದೇಶದಲ್ಲಿ ಒಟ್ಟು ೨, ೪೫, ೩೮೦ ಕೊರೊನಾ  ಸೋಂಕು ಪ್ರಕರಣಗಳು ಈವರೆಗೆ ದಾಖಲಾಗಿದ್ದು.. ಈ ಪೈಕಿ  ೫೦೩ ಪ್ರಕರಣಗಳು ಹೊಸದಾಗಿ ದಾಖಲಾಗಿವೆ

ಸುದ್ದಿ ಓದಿ