ಲಿಂಗ ಸಮಾನತೆ ಒಪ್ಪಂದ ಸೇರಲು ಅಮೆರಿಕಾ ನಿರ್ಧಾರ
ವಾಷಿಂಗ್ಟನ್, ಡಿ 3 - ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ಸಚಿವರ ಮಟ್ಟದ ಸಭೆಯಲ್ಲಿ ಅಮೆರಿಕಾ ಲಿಂಗ ಸಮಾನತೆ ಒಪ್ಪಂದವನ್ನು ಸೇರಲಿದೆ ಎಂದು ಅಮೆರಿಕಾ ವ್ಯಾಪಾರಿ ಪ್ರತಿನಿಧಿ (ಯುಎಸ್‌ಟಿಆರ್) ಕಚೇರಿ ಪ್ರಕಟಿಸಿದೆ.
12 ನೇ ಡಬ್ಲ್ಯುಟಿಒ ಸಚಿವರ ಸಮ್ಮೇಳನದಲ್ಲಿ ಲಿಂಗ ಸಮಾನತೆಯ ಪ್ರಗತಿ ಹಾಗೂ ವ್ಯಾಪಾರದೊಳಗಿನ ಮಹಿಳಾ ಆರ್ಥಿಕ ಸಬಲೀಕರಣದ ಪ್ರಗತಿಯ ಜಂಟಿ ಘೋಷಣೆಗೆ ಸೇರ್ಪಡೆಗೊಳ್ಳುವ ಅಮೆರಿಕಾ ಉದ್ದೇಶವನ್ನು ಇಂದು ಪ್ರಕಟಿಸಿದೆ ಎಂದು ಅಮೆರಿಕಾ ವ್ಯಾಪಾರ ಪ್ರತಿನಿಧಿ ಕಚೇರಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಲಿಂಗ ಸಮಾನತೆಯನ್ನು ಮುನ್ನಡೆಸುವ ಮೂಲಕ "ಬಿಲ್ಡ್ ಬ್ಯಾಕ್ ಬೆಟರ್" ಎಂಬ ಮಾರ್ಗದರ್ಶಿ ಘೋಷಣೆಗೆ ಬಿಡೆನ್ ಆಡಳಿತದ ಬದ್ಧತೆಯನ್ನು ಈ ಘೋಷಣೆ ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಅಮೆರಿಕಾ ಹಾಗೂ ಪ್ರಪಂಚದಾದ್ಯಂತ "ಮಹಿಳೆಯರು, ಬಾಲಕಿಯರು ಸೇರಿದಂತೆ - ಎಲ್ಲ ಜನರ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಮುನ್ನಡೆಸುವ ಬಿಡೆನ್-ಹ್ಯಾರಿಸ್ ಆಡಳಿತದ ಕಾರ್ಯತಂತ್ರ ಈ ಮೂಲಕ ಸ್ಥಿರವಾಗಿದೆ" ಎಂದು ಹೇಳಿಕೆ ತಿಳಿಸಿದೆ.
ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನವೆಂಬರ್ 30 ಡಿಸೆಂಬರ್ 3 ರ ನಡುವೆ WTO ದ 12 ನೇ ಸಚಿವರ ಸಮ್ಮೇಳನ ನಡೆಯುತ್ತಿದೆ.