ಆಲ್ ಕರ್ನಾಟಕ ಮಶಾಯಿಖ ಕೌನ್ಸಿಲ್: ಗುಲ್ಬರ್ಗಾ ಸೂಫಿ ಸಂತರ ಭೇಟಿ
ಶಿರಹಟ್ಟಿ 26: ಹಿಂದೂ-ಮುಸ್ಲಿಂ ಧರ್ಮದ ತತ್ವಗಳೆರಡನ್ನೂ ಅರಿವರಾಗಿದ್ದರು, ಬಳಿತನ್ನು ಬಯಸಿ ಹರಿಸಿ ಕಳಿಸುತ್ತಿದ್ದರು. 15ನೇ ಶತಮಾನದ ಬಿಜಾಪೂರದ ಖಾಜಾ ಅಮೀನ್ ಧಿನರು ಎಂದು ಶಿರಹಟ್ಟಿ ಪಕ್ಕೀರ ಸಿದ್ದರಾಮ ಶ್ರೀಗಳ ಹೇಳಿದರು. ಪಟ್ಟಣದ ಫಕ್ಕೀರೇಶ್ವರ ಶ್ರೀಮಠಕ್ಕೆ, ಶುಕ್ರವಾರ ಆಲ್ ಕರ್ನಾಟಕ ಮಶಾಯಿಖ ಕೌನ್ಸಿಲ್ ಹುಬ್ಬಳ್ಳಿ ಇವರ ವತಿಯಿಂದ ಗುಲ್ಬರ್ಗಾದ ಹಜರತ ಸ್ವಾಜಾ ಬಂದಾನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್-ಹುಸೈನಿ ಸಜ್ಜಾದಾ ನಶೀನ್ ಮತ್ತು ಮುತವಲ್ಲಿ ಸೂಫಿ ಸಂತರ ಭೇಟಿ ನೀಡಿ ಸಂಧರ್ಭದಲ್ಲಿ ಶ್ರೀಗಳ ಸನ್ಮಾನಿಸಿ ಮಾತನಾಡಿದರು.
ಬಿಜಾಪೂರದ ಖಾಜಾ ಅಮೀನ್ ಧಿನರು ಅವರ ಶಿರಹಟ್ಟಿ ಕರ್ತೃ ಫಕ್ಕೀರೇಶ್ವರ ಅವರಿಗೆ 15 ನೇ ಶತಮಾನ ಕಾಲದಲ್ಲಿ ದಿಕ್ಷೇ ನೀಡಿದರು. “ದ್ವೇಷ ಬಿಡು, ಪ್ರೀತಿಮಾಡು' ಇದು ಕರ್ತೃಗಳ ದಿವ್ಯ ಸಂದೇಶ. ಮಠದ ಒಂದು ಭಾಗ ಹಿಂದೂ ವಾಸ್ತು ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ರೂಪಗೊಂಡಿದ್ದರೆ, ಇನ್ನೊಂದು ಭಾಗ ಮುಸ್ಲಿಂ ವಾಸ್ತುಶಿಲ್ಪ ಶೈಲಿಯಲ್ಲಿ ರೂಪಗೊಂಡಿದೆ. ಒಂದೆಡೆ "ಹರಹರ ಮಹಾದೇವ" ಎಂಬ ಮಂತ್ರ ಘೋಷ ಮೊಳಗಿದರೆ, ಇನ್ನೊಂದೆಡೆ ''ಫಕೀರೇಶ್ವರಕೀ ದೋಸ್ತ ಹರಹರಾ ವೋ ಧೀನ್' ಎಂಬ ಮಂತ್ರ ಘೋಷ ನಿನದಿಸುತ್ತಿದೆ. ಒಂದೆಡೆ ಅಗರ ಬತ್ತಿಗಳ ಸುವಾಸನೆ, ಮತ್ತೊಂದೆಡೆ ಊದಿನ ಪರಿಮಳ ಹೊಮ್ಮುತ್ತದೆ. ಧ್ವಜದಲ್ಲಿ ಹಿಂದೂ-ಮುಸ್ಲಿಂ ಎರಡು ಸಂಕೇತಗಳು ಕಂಡು ಬರುತ್ತವೆ ಶ್ರೀಗಳ ಹೇಳಿದರು. ಗುಲ್ಬರ್ಗಾದ ಹಜರತ ಸ್ವಾಜಾ ಬಂದಾನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್-ಹುಸೈನಿ ಸಜ್ಜಾದಾ ನಶೀನ್ ಮಾತಾನಾಡಿದರು.
ಬಿಜಾಪೂರದ ಖಾಜಾ ಅಮೀನ್ ಧಿನರು ಅವರು ಖ್ವಾಜಾ ಬಂದೇನವಾಜ ದಿಕ್ಷೇ ನೀಡಿದರು. ಮುಸ್ಲಿಂ ಸೂಫಿ ಸಂತರಲ್ಲಿ ಒಬ್ಬರಾಗಿದ್ದಾರೆ. ಗುಲ್ಬರ್ಗಾದಲ್ಲಿ, ಶರಣ ಬಸವೇಶ್ವರರ ಸಮಕಾಲೀನರಾಗಿದ್ದರು. ಹಿಂದೂ-ಮುಸ್ಲಿಂರು ಗುಲ್ಬರ್ಗಾದಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭಕ್ತರಾಗಿದ್ದಾರೆ. ಈ ದರ್ಗಾ ಒಂದು ಜಾಗೃತವಾದ ಧಾರ್ಮಿಕ ಕ್ಷೇತ್ರವೆಂಬ ಜನನಂಬಿಕೆಯಿದೆ ಎಂದು ಹೇಳಿದರು. ವಿಧಾನ ಪರಿಷತ್ತು ಶಾಸಕ ಸಲೀಂ ಅಹ್ಮದ್, ರಾಜ್ಯ ಪ್ರಧಾನ ಕಾರ್ಯಧರ್ಶಿ ಸುಜಾತ ದೂಡ್ಡಮನಿ, ಪಪಂ ಮಾಜಿ ಅಧ್ಯಕ್ಷರ ಹುಮಾಯನ್ ಮಾಗಡಿ, ಮಾಬುಸಾಬ ಲಕ್ಷೇಶ್ವರ,ಎಸ್ ಡಿ ಮಕಾಂದರ್, ದೇವಕ್ಕ ಗುಡಿಮನಿ, ಚಾಂದಸಾಬ್ ಮುಳಗುಂದ, ಹೂನ್ನಪ್ಪ ಶಿರಹಟ್ಟಿ, ಪರಮೇಶ ಪರಬ,ಮುತ್ತು ಬಾವೀಮನಿ, ಅಜ್ಜಪ್ಪ ಪಾಟೀಲ, ಅನಂದ ಕೋಳಿ ಇತರರಿದ್ದರು.