ಅಂತರರಾಷ್ಟ್ರೀಯ

ರಷ್ಯಾದಲ್ಲಿ ವಿಮಾನ ಪತನ: ಓರ್ವ ಸಾವು, 6 ಮಂದಿಗೆ ಗಾಯ

ರಷ್ಯಾದಲ್ಲಿ ವಿಮಾನ ಪತನ: ಓರ್ವ ಸಾವು, 6 ಮಂದಿಗೆ ಗಾಯ

ಮಾಸ್ಕೋ: ಮೇ 01 : ರಷ್ಯಾದಲ್ಲಿ ಅಗ್ನಿಶಾಮಕ ವಿಮಾನವೊಂದು ಇಂದು ಪತನಗೊಂಡಿದೆ. ಈ ವಿಮಾನ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ತುರ್ತು ಸೇವೆಗಳ ವಿಭಾಗ ಸ್ಪುಟ್ನಿಕ್‌ಗೆ ಈ ಕುರಿತು ಮಾಹಿತಿ ನೀಡಿದೆ.

ಸ್ಥಳೀಯ ಕಾಲಮಾನ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪ್ರಾದೇಶಿಕ ಆರೋಗ್ಯ ಸಚಿವಾಲಯ ತಿಳಿಸಿದೆ, ಅಗ್ನಿಶಾಮಕ ಸಿಬ್ಬಂದಿ ರಷ್ಯಾದ ಮಕ್ಲಾಕನ್ ಗ್ರಾಮದಲ್ಲಿ ಬೆಂಕಿಯನ್ನು ನಂದಿಸಿ ಹಿಂತಿರುಗುತ್ತಿದ್ದಾಗ ಮೊಗೊಚಾದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಸುದ್ದಿ ಓದಿ