14 ವರ್ಷಗಳ ನಂತರ ಪೋಷಕರ ಮುಂದೆ ಮಗ ದಿಢೀರ್ ಪ್ರತ್ಯಕ್ಷ !
ದಿಂಡೋರಿ: ಅ, 24 ಬರೋಬ್ಬರಿ 14 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೋರ್ವ ಮರಳಿ ಕುಟುಂಬ ಸೇರಿದ್ದಾನೆ.
ಹೌದು, ಸಿಕ್ಕಿಂ ಮೂಲದ ಕಿಶೋರ್ ರೈ ಎಂಬ ಯುವಕ 14 ವರ್ಷಗಳ ಹಿಂದೆ ಅಸ್ಸೋಂನಿಂದ ನಾಪತ್ತೆಯಾಗಿದ್ದ. ಈತ ಗುವಾಹಟಿ, ಹರಿಯಾಣ, ಮಧ್ಯಪ್ರದೇಶದ ಮೂಲಕ ಮಹಾರಾಷ್ಟ್ರ ತಲುಪಿದ್ದ. ಇದಾದ ನಂತರ ಎರಡು ವರ್ಷಗಳ ಹಿಂದೆ ಕಿಶೋರ್ ದಿಂಡೋರಿಯಲ್ಲಿರುವ ವಿಲಾಸ್ ದೇಶಮುಖ್ ಅವರ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ.
ಇದಾದ ನಂತರ ಈತನ ಬಗ್ಗೆ ತಿಳಿದ ಮಾಲೀಕ ದೇಶಮುಖ್, ಕಿಶೋರ್ ತನ್ನ ಕುಟುಂಬ ಸೇರಲು ಶ್ರಮಪಟ್ಟಿದ್ದಾರೆ. ಕಿಶೋರ್ ಕುಟುಂಬದವರು ಆತ ಸತ್ತಿದ್ದಾನೆ ಎಂದು ತಿಳಿದಿದ್ದರು. ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದ ಮಗ ಜೀವಂತವಾಗಿ ಅವರ ಕಣ್ಣ ಮುಂದೆ ಬಂದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.