ಆಫ್ಘಾನಿಸ್ತಾನದಲ್ಲಿ 101 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವ ಆಚರಣೆ
ಕಾಬೂಲ್ ಆಗಸ್ಟ್ 18: ಹದಗೆಟ್ಟಿರುವ ಭದ್ರತಾ ಪರಿಸ್ಥಿತಿಯ ನಡುವೆ ಆಫ್ಘಾನಿಸ್ತಾನದಲ್ಲಿ ಬ್ರಿಟಿಷ್ ಆಕ್ರಮಣದಿಂದ ಸ್ವಾತಂತ್ರ್ಯ ಪಡೆದ 101 ನೇ ವಾಷರ್ಿಕೋತ್ಸವವನ್ನು ಮಂಗಳವಾರ ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯೋತ್ಸವದ ಅಧಿಕೃತ ಆಚರಣೆ ಭಾಗವಾಗಿ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಮಂಗಳವಾರ ಬೆಳಿಗ್ಗೆ ದೇಶದ ರಕ್ಷಣಾ ಸಚಿವಾಲಯದ ಆವರಣದಲ್ಲಿ ಸ್ವಾತಂತ್ರ್ಯ ಧ್ವಜಸ್ತಂಭಕ್ಕೆ ಹೂಗುಚ್ಛವಿರಿಸಿ, ಗೌರವ ವಂದನೆ ಸ್ವೀಕರಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ತಾಲಿಬಾನ್ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಗೆ ದೇಶ ಸಾಕ್ಷಿಯಾಗಿದ್ದು, ಅದರಲ್ಲೂ ವಿಶೇಷವಾಗಿ ಕಾಬೂಲ್ ಸಾಕ್ಷಿಯಾಗಿರುವುದರಿಂದ ಶಾಂತಿ ಮತ್ತು ಸುರಕ್ಷತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ಅಧ್ಯಕ್ಷರು ಗೌರವ ನಮನ ಸಲ್ಲಿಸಿದರು.
ನಿನ್ನೆಯಷ್ಟೇ ಕಾಬೂಲ್ನ ಹಲವಾರು ಸ್ಥಳಗಳಲ್ಲಿ ರಾಕೆಟ್ ದಾಳಿ ನಡೆದಿದ್ದು, ಈ ದಾಳಿಯಲ್ಲಿ ನಾಲ್ಕು ಮಕ್ಕಳು ಮತ್ತು ಮಹಿಳೆ ಸೇರಿದಂತೆ 10 ನಾಗರಿಕರು ಗಾಯಗೊಂಡಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ತಾಲಿಬಾನ್ ಮತ್ತು ಅಮೆರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ, ಘನಿ ಸೇರಿದಂತೆ ಆಫ್ಘಾನಿಸ್ತಾನ ನಾಯಕರು ಹಿಂಸಾಚಾರ ನಿಲ್ಲಿಸುವಂತೆ ತಾಲಿಬಾನ್ ಸಂಘಟನೆಗೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ.
ಆದರೂ, ಉಗ್ರರು ದಾಳಿಗಳನ್ನು ತೀವ್ರಗೊಳಿಸಿದ್ದಾರೆ.