ಅಂತರರಾಷ್ಟ್ರೀಯ

ಆಫ್ಘಾನಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಜನರ ಸಾವು

ಆಫ್ಘಾನಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಜನರ ಸಾವು

ಕಂದಹಾರ್‌: ಅ 15 : ಅಫ್ಘಾನಿಸ್ತಾನದ ಕಂದಹಾರ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಇದರಲ್ಲಿ 16 ಜನ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಈ ದಾಳಿಯಲ್ಲಿ ಸುಮಾರು 40 ಜನರು ಗಾಯಗೊಂಡಿದ್ದಾರೆ. ದಕ್ಷಿಣ ಪ್ರಾಂತ್ಯದ ಕಂದಹಾರ್‌ನಲ್ಲಿ ಶುಕ್ರವಾರ ಮಸೀದಿ - ಇಮಾಮ್ ದರ್ಗಾದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


ಶುಕ್ರವಾರ ಪ್ರಾರ್ಥನೆ ನಡೆಯುವ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಭಯೋತ್ಪಾದಕ ಗುಂಪು ಹೊತ್ತುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು  ಹಲವಾರು ದಾಳಿಗಳನ್ನು ನಡೆಸಿದೆ.


ಕಳೆದ ಒಂದು ವಾರದಲ್ಲಿ ಅಫ್ಘಾನಿಸ್ತಾನದ ಶಿಯಾ ಮಸೀದಿಯ ವಿರುದ್ಧ ನಡೆದ ಎರಡನೇ ಬಾಂಬ್ ದಾಳಿ ಇದಾಗಿದೆ.

ಸುದ್ದಿ ಓದಿ