ಅಂತರರಾಷ್ಟ್ರೀಯ

ಅಫ್ಗಾನಿಸ್ತಾನ: ಪಂಜಶಿರ್‌ನಿಂದ ತಜಕಿಸ್ತಾನಕ್ಕೆ ಸಲೇಹ್‌ ಪರಾರಿ

ಅಫ್ಗಾನಿಸ್ತಾನ: ಪಂಜಶಿರ್‌ನಿಂದ ತಜಕಿಸ್ತಾನಕ್ಕೆ ಸಲೇಹ್‌ ಪರಾರಿ

ಕಾಬುಲ್‌, ಸೆ 6 : ಅಫ್ಗಾನ್‌ನ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ತಾಲಿಬಾನಿಗರ ದಾಳಿಗೆ ಬೆದರಿ ಪಂಜಶೀರ್ ಪ್ರಾಂತ್ಯ ತೊರೆದು ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಲ್ ಜಜೀರಾ ಸೋಮವಾರ ವರದಿ ಮಾಡಿದೆ.

 ಹಿಂದಿನ ಅಫ್ಘಾನ್ ಆಡಳಿತದ ಮೂಲವನ್ನು ಉಲ್ಲೇಖಿಸಿ ಮಾಡಿರುವ ವರದಿ ಪ್ರಕಾರ, ಒಂದು ದಿನದ ಮುಂಚೆಯೇ, ತಾಲಿಬಾನ್ (ರಷ್ಯಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ) ಪಂಜ್‌ಶೀರ್‌ನ ಸಂಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಸಲೇಹ್ ಮತ್ತು ಅಹ್ಮದ್ ಮಸೂದ್ ನೇತೃತ್ವದ ಪ್ರತಿರೋಧ ಕೊನೆಯಾಗಿತ್ತು.

ಸುದ್ದಿ ಓದಿ