ಅಫ್ಘನ್ನರ ನರಕಯಾತನೆ.. ಪಾಕಿಸ್ತಾನಿಯರ ವಿಕೃತಾನಂದ...!
ಕಾಬೂಲ್, ಆಗಸ್ಟ್ 23 : ಕೇವಲ 75,000 ಸದಸ್ಯರನ್ನು ಹೊಂದಿರುವ ತಾಲಿಬಾನ್, ಒಂದೂವರೆ ತಿಂಗಳಲ್ಲಿ ಸುಮಾರು ನಾಲ್ಕು ಕೋಟಿ ಜನಸಂಖ್ಯೆ ಹೊಂದಿರುವ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಸಮುದಾಯವನ್ನು ಅಚ್ಚರಿಗೊಳಿಸಿದೆ. ಈ ಕ್ರಮವಾಗಿ ಸೇನಾ ಪಡೆಗಳ ವಾಪಸಾತಿಯೇ ಈ ಬೆಳವಣಿಗೆಗಳಿಗೆ ಕಾರಣ ಎಂದು ಅಮೆರಿಕಾ ವಿರುದ್ದ ವ್ಯಾಪಕ ಆರೋಪಗಳು ಕೇಳಿಬರುತ್ತಿವೆ . ಆದರೆ, ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ವಿಶ್ವದ ದೊಡ್ಡಣ್ಣ ಆರೋಪಗಳನ್ನು ತಳ್ಳಿಹಾಕುತ್ತಲೇ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿಸುತ್ತಿದೆ. ಈಗ ಹೊಸದಾಗಿ ಪಾಕಿಸ್ತಾನವನ್ನು ಈ ವ್ಯವಹಾರಗಳಲ್ಲಿ ತೊಡಗಿಸುವ ಮೂಲಕ ಟೀಕೆಗೆ ಗುರಿಯಾಗಿದೆ.
ಪಾಕಿಸ್ತಾನ, ಆ ದೇಶದ ಗುಪ್ತಚರ ಸಂಸ್ಥೆ - ಐ ಎಸ್ ಐಯ ನೆರವಿನಿಂದಾಗಿ ತಾಲಿಬಾನ್‌ಗಳು ಆ ಪ್ರದೇಶದಲ್ಲಿ ಬಲಿಷ್ಠವಾಗಿ ಬೇರು ಬಿಟ್ಟಿದ್ದಾರೆ ಎಂದು ರಿಪಬ್ಲಿಕನ್ ಸದಸ್ಯ ಸ್ಟೀವ್ ಚಬೊಟ್ ಗಂಭೀರವಾಗಿ ಆರೋಪಿಸಿದ್ದಾರೆ. ಇಂಡಿಯಾ ಕಾಕಸ್‌ನ ಸಹ-ಅಧ್ಯಕ್ಷರಾಗಿ ಭಾನುವಾರ ನಡೆದ ಸಭೆಯಲ್ಲಿ ಹಿಂದೂ ಪೊಲಿಟಿಕಲ್ ಆಕ್ಷನ್ ಕಮಿಟಿ ವರ್ಚುವಲ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಫ್ಘಾನಿಸ್ತಾನ ನೆಲದಲ್ಲಿ ಸದ್ಯದ ಪರಿಸ್ಥಿತಿಗೆ ಪಾಕಿಸ್ತಾನ ಕಾರಣ. ತಾಲಿಬಾನ್ ಗಳಿಗೆ ಬೆನ್ನೆಲುಬಾಗಿ ನಿಂತು .. ದುರಾಕ್ರಮಣಕ್ಕೆ ಆ ದೇಶ ನೆರವಾಯಿತು ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಅಫ್ಘಾನಸ್ತಾನಿಯರ ನರಕಯಾತನೆ ಅರಿತ ನಂತರ ನಂತರ, ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದ ಅನೇಕ ಭಾಗಗಳಲ್ಲಿ ಸಂಭ್ರಮಾಚರಣೆ ನಡೆದಿವೆ. ಪಾಕಿಸ್ತಾನದ ರಾಜಕಾರಣಿಗಳು, ಅಧಿಕಾರಿಗಳು ಈ ಸಂಭ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜನರು ರಸ್ತೆಗಳಲ್ಲಿ ಜಮಾಯಿಸಿ ನೃತ್ಯ ಮಾಡುವ ದೃಶ್ಯಗಳೂ ವೈರಲ್ ಆಗಿವೆ ಎಂದು ಸ್ಟೀವ್ ಚಬೋಟ್ ಉಲ್ಲೇಖಿಸಿದ್ದಾರೆ. ಇನ್ನೂ ಪರಾರಿಯಾಗಲು ಯತ್ನಿಸುತ್ತಿರುವ ಅಫ್ಘನ್ ಜನರಿದ ಸರ್ಕಾರ ಭಾರೀ ಹಣ ವಸೂಲಿ ಮಾಡಿ .. ಪಾಕ್ ಭೂ ಪ್ರದೇಶದಲ್ಲಿ ಆಶ್ರಯ ಕಲ್ಪಿಸುತ್ತಿದೆ ಎಂದು ಟೀಕಿಸಿದ್ದಾರೆ. " ಇಷ್ಟು ಸಾಕಲ್ಲವೇ....?" ಪಾಕಿಸ್ತಾನ, ತಾಲಿಬಾನಿಗಳಿಗೆ ಎಷ್ಟು ಸಹಕಾರ ನೀಡುತ್ತಿದೆ .. ಅಫ್ಘನ್ನರ ನರಕಯಾತನೆ ನೋಡಿ ಎಷ್ಟು ವಿಕೃತಾನಂದ ಅನುಭವಿಸುತ್ತಿದೆ ಎಂದು ಹೇಳಲು ಎಂದು ಅವರು ಪ್ರಶ್ನಿಸಿದ್ದಾರೆ.
.
ಪಾಕ್ ಸಚಿವನ ಅಫ್ಘನ್ ಯಾತ್ರೆ;
ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡುವುದು ತೀವ್ರ ಚರ್ಚೆಯ ವಿಷಯವಾಗಿದೆ. ಅಫ್ಘನ್ ನಲ್ಲಿ ಅಶಾಂತ ಪರಿಸ್ಥಿತಿಯಲ್ಲಿ ಅಲ್ಲಿಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಖುರೇಷಿ ಎಂಬುದು ವಿಶೇಷ. ಹಕ್ಕಾನಿ ನೆಟ್ವರ್ಕ್ ಅನ್ನು ಅಫ್ಘನ್ ಸ್ವಾಧೀನಪಡಿಸಿಕೊಂಡ ನಂತರ, ಸರ್ಕಾರ ರಚನೆಗೆ ತಾವು ಸಹಕಾರ ನೀಡುವುದಾಗಿ, ತಾಲಿಬಾನ್ ನೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದಾಗಿ ಪಾಕಿಸ್ತಾನ ಬಹಿರಂಗವಾಗಿ ಘೋಷಿಸಿದೆ. ಇದರಿಂದ ಚೀನಾ,ಇರಾನ್ ನಂತರ ತಾಲಿಬಾನ್ ಗೆ ಬೆಂಬಲ ಘೋಷಿಸಿದ ಮೂರನೇ ದೇಶ ಪಾಕಿಸ್ತಾನವಾಗಿದೆ. ಆದರೆ, ಪಾಕಿಸ್ತಾನ ತಾಲಿಬಾನ್ ಗೆ ಸಹಕರಿಸುತ್ತಿದೆ ಎಂಬ ಸಾರ್ವಜನಿಕ ಆರೋಪಗಳ ನಡುವೇಯೇ ಆ ದೇಶದ ಸಚಿವರು ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿರುವುದು ವಿಶೇಷವಾಗಿದೆ.