ನ್ಯಾಯವಾದಿಗಳ ದಿನಾಚರಣೆ: ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿ
ಸವದತ್ತಿ 04: ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 3ರಂದು ನ್ಯಾಯವಾದಿಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸವದತ್ತಿ ನ್ಯಾಯವಾದಿಗಳ ಹೊಸ ಸಬಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಬಿ.ಎಮ್.ಯಲಿಗಾರ ಅವರು ನ್ಯಾಯವಾದಿಗಳ ದಿನಾಚರಣೆ ಅಂಗವಾಗಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಸವದತ್ತಿಯ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಶಶಿಧರ ಎಮ್. ಗೌಡ, ಅವರು ಹಿರಿಯ ನ್ಯಾಯವಾದಿಗಳು ಕೊಟ್ಟಂತಹ ಮಾರ್ಗದರ್ಶನವನ್ನು ಹಾಗೂ ಕಾನೂನು ತಿಳುವಳಿಕೆಯನ್ನು ಮತ್ತು ಅವರ ಅಪಾರವಾದ ಜ್ಞಾನವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಹಾಗೂ ಪಾಲಿಸುವುದು ಮತ್ತು ಅಳವಡಿಸಿಕೊಳ್ಳುವುದು ಎಲ್ಲ ಕಿರಿಯ ನ್ಯಾಯವಾದಿಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಎಚ್.ಎನ್.ಕಿತ್ತೂರ, ಎಮ್.ಬಿ.ಏಣಗಿ, ಬಿ.ವಿ.ಮಲಗೌಡರ, ಎಸ್.ಟಿ.ತೊರಗಲ್ಲಮಠ ಹಾಗೂ ಆರಿ್ಬ. ಶಂಕರಗೌಡರ ನ್ಯಾಯವಾದಿಗಳಿಗೆ ಗೌರವಪೂರ್ವಕ ಸನ್ಮಾನಿಸಲಾಯಿತು.
2ನೇ ಹೆಚ್ಚುವರಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶ ಹರೀಶ ಜಿ, ಮತ್ತು ಸಹಾಯಕ ಸರ್ಕಾರಿ ಅಬಿಯೋಜಕ ಎಸ್.ಎಮ್.ನದಾಫ, ಎಸ್.ಎಮ್.ಜಂಬೂನವರ ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ವಿ.ಸಾಂಭಯ್ಯನಮಠ, ಪದಾಧಿಕಾರಿಗಳಾದ ಪಿ.ಎನ್.ಡೊಳ್ಳಿನ, ಎಸ್.ಎಸ್.ಮಾನೆ, ಎಸ್.ಎಸ್.ಗಿರಿಜನ್ನವರ, ಮಹಿಳಾ ಪ್ರತಿನಿಧಿ ಜಯಶ್ರೀ ಪೂಜೇರ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಮ್.ಎಮ್.ಮಡಿವಾಳರ ಸ್ವಾಗತಿಸಿದರು, ಎಸ್.ಎಸ್.ಮಾನೆ, ನಿರೂಪಿಸಿದರು, ಸಿ.ವಿ.ಸಾಂಭಯ್ಯನಮಠ, ವಂದಿಸಿದರು.